RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

RCB vs CSK: ಪೊಲೀಸರು ಸದ್ಯ ಚಿನ್ನಸ್ವಾಮಿ ಸ್ಟೇಡಿಯಂ ಒಳಗಿರುವ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಸ್ಟೇಡಿಯಂ ಹೊರಗಡೆ ಬಿಗುವಿನ ವಾತಾವರಣ ಉಂಟಾಗಿದೆ.

First published:

  • 17

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಹೈವೋಲ್ಟೇಜ್​ ಮ್ಯಾಚ್​ ನಡೆಯಲಿದೆ. ಈ ಪಮದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಈಗಾಗಲೇ ಆನ್​ಲೈನ್​ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿದೆ.

    MORE
    GALLERIES

  • 27

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಬಾಕ್ಸ್​ ಆಫೀಸ್​ನಲ್ಲಿ ಪಂದ್ಯದ ಟಿಕೆಟ್​ ಮಾರಾಟ ಸಂದರ್ಭ ಅಭಿಮಾನಿಗಳು ಟಿಕೆಟ್​ ಸಿಗದ ಕಾರಣ ಆಕ್ರೋಶಗೊಂಡು ಸ್ಟೇಡಿಯಂಗೆ ಮುತ್ತುಗೆ ಹಾಕಲು ಯತ್ನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಸ್ವಲ್ಪ ಗೊಂದಲ ಏರ್ಪಟ್ಟ ಕಾರಣ ಪೊಲೀಸರು ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇಂದು ಬೆಳಗ್ಗಿನಿಂದ ಆರ್​ಸಿಬಿ ಅಭಿಮಾನಿಗಳು ಟಿಕೆಟ್​ಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಾಲುಗಟ್ಟಿ ನಿಂತಿದ್ದರು.

    MORE
    GALLERIES

  • 37

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಇದರ ನಡುವೆ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಬಿಗ್​ ಶಾಕಿಂಗ್​ ನ್ಯೂಸ್​ ಹೊರಬಿದ್ದಿದೆ. ನಾಳೆ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಚೆನ್ನೈ ವಿರುದ್ಧದ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ಟೇಡಿಯಂನಲ್ಲಿ ಭದ್ರತಾ ವೈಫಲ್ಯ ಎನ್ನಲಾಗುತ್ತಿದೆ.

    MORE
    GALLERIES

  • 47

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಹೌದು, ಸ್ಟೇಡಿಯಂ ಬಾರ್ ನಲ್ಲಿರುವ ಮದ್ಯದ ಸ್ಟಾಕ್ ನಲ್ಲೂ ವ್ಯತ್ಯಾಸ ಆರೋಪ ಕೇಳಿಬಂದ ಹಿನ್ನಲೆ ಇದೀಗ ಅಬಕಾರಿ ಇಲಾಖೆಯಿಂದ ಪೊಲೀಸರಿಗೆ ‌ಮಾಹಿತಿ ನೀಡಲಾಗಿದೆ. ಪೊಲೀಸರಿಗೆ ಈವರೆಗೆ ಮ್ಯಾಚ್ ಬಗ್ಗೆ ಯಾವುದೇ ಸೆಕ್ಯುರಿಟಿ ಬಗ್ಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಸದ್ಯ ಕಬ್ಬನ್ ಪಾರ್ಕ್ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

    MORE
    GALLERIES

  • 57

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಪೊಲೀಸರು ಸದ್ಯ ಚಿನ್ನಸ್ವಾಮಿ ಸ್ಟೇಡಿಯಂ ಒಳಗಿರುವ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಸ್ಟೇಡಿಯಂ ಹೊರಗಡೆ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಹೆಚ್ಚಿನ ಮಾಹಿತಿ ಪಡೆಯಲು ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್​ಪೆಕ್ಟರ್ ಚೈತನ್ಯ ಅವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 67

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಇನ್ಸ್​ಪೆಕ್ಟರ್ ಚೈತನ್ಯ ಅವರು ಅಧಿಕಾರಿಗಳ ಬಳಿ ಈಗಾಗಲೇ ನಡೆದಿರುವ ಮ್ಯಾಚ್ ಹಾಗೂ ನಾಳಿನ ಮ್ಯಾಚ್ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಸ್ಟೇಡಿಯಂನಲ್ಲಿ ಇರುವ ಕಛೇರಿಗೆ ನೋಟಿಸ್ ಜಾರಿ ಮಾಡಲಾಗಿದೆ.

    MORE
    GALLERIES

  • 77

    RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

    ಇದರ ನಡುವೆ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಸೇಲ್ ಸರಿಯಾಗಿ ನಡೆಸಲಿಲ್ಲ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿದ್ದು, ಸ್ಟೇಡಿಯಂ ಸುತ್ತ ಪೋಲಿಸರು ಹೆಚ್ಚಿನ ಭದ್ರತೆ ನೀಡಿದ್ದಾರೆ ಜೊತೆಗೆ ಗೇಟ್ ಕೀ ಸಹ ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    MORE
    GALLERIES