ಕಳೆದ ವರ್ಷ ಯಾವುದೇ ನಿರೀಕ್ಷೆ ಇಲ್ಲದೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ವರ್ಷ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸುತ್ತಿರುವ ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಿದೆ. ಕಳೆದ ಸೀಸನ್‌ನಿಂದ ಈ ಸೀಸನ್‌ಗೆ ತಂಡದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಹಾರ್ದಿಕ್ ಜೊತೆಗೆ ಶುಬ್ಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಶಮಿ ಮತ್ತು ರಶೀದ್ ಖಾನ್ ರೂಪದಲ್ಲಿ ಗುಜರಾತ್ ಟೈಟಾನ್ಸ್ ತುಂಬಾ ಬಲಿಷ್ಠವಾಗಿ ಕಾಣುತ್ತದೆ.
2022ರ ಋತುವು ಮುಂಬೈ ಇಂಡಿಯನ್ಸ್‌ಗೆ ಆರಂಭದಲ್ಲಿಯೇ ಹಿನ್ನಡೆಯಾಗಿತ್ತು. ಪ್ರಮುಖ ಆಟಗಾರರನ್ನು ಕಳೆದುಕೊಂಡ ಮುಂಬೈ ಹೊಸ ತಂಡದೊಂದಿಗೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೆ ಈ ಬಾರಿ ಮುಂಬೈ ಮತ್ತೊಮ್ಮೆ ಚಾಂಪಿಯನ್‌ನ ಆಟವಾಡುವ ಸಾಧ್ಯತೆ ಇದೆ. ಬುಮ್ರಾ ಇಲ್ಲದಿದ್ದರೂ, ತಂಡವು ಜೋಫ್ರಾ ಆರ್ಚರ್ ರೂಪದಲ್ಲಿ ಗುಣಮಟ್ಟದ ಬೌಲರ್ ಅನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ಆರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಇದೆ.
ಕಳೆದ ಋತುವಿನಲ್ಲಿ ಪ್ರಶಸ್ತಿ ಕಳೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಐಪಿಎಲ್ ನಲ್ಲಿ ಫೇವರಿಟ್ ಆಗಿ ಕಣಕ್ಕೆ ಇಳಿಯಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ದೇವ್ ದತ್ ಪಡಿಕ್ಕಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಬಲಿಷ್ಠವಾಗಿದೆ. ಬೌಲ್ಟ್, ಅಶ್ವಿನ್ ಮತ್ತು ಚಾಹಲ್ ರೂಪದಲ್ಲಿಯೂ ಬೌಲಿಂಗ್ ಬಲಿಷ್ಠವಾಗಿ ಕಾಣುತ್ತದೆ. ಈ ಕ್ರಮದಲ್ಲಿ ರಾಜಸ್ಥಾನ ಐಪಿಎಲ್ 16ನೇ ಸೀಸನ್ ಗೆಲ್ಲುವ ಸಾಮರ್ಥ್ಯ ಹೊಂದಿದೆ.
ಇನ್ನು, ಆರ್ಸಿಬಿ ತಂಡವೂ ಈ ಬಾರಿ ಆದರೂ ಕಪ್ ಗೆಲ್ಲುತ್ತದೆ ಎಂಬ ಆಸೆಯಲ್ಲಿ ಅಭಿಮಾನಿಗಳಿದ್ದಾರೆ. ಅದರಂತೆ, ಈ ಬಾರಿ ಐಪಿಎಲ್ಗೂ ಮುನ್ನ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅದರಂತೆ, ಅದರಂತೆ ಟೀಂನಲ್ಲಿ ಈ ಬಾರಿ ಸ್ಟಾರ್ ಆಟಗಾರರ ದಂಡೇ ಇದ್ದು, ಕಪ್ ಗೆಲ್ಲಯವ ರೇಸ್ನಲ್ಲಿದೆ.
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಸಹ ಈವರೆಗೆ 4 ಬಾರಿ ಕಪ್ ಗೆದ್ದಿದ್ದು, ಈ ಬಾರಿ 5ನೇ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಈಗಾಗಲೇ ರುತುರಾಜ್ ಗಾಯಕ್ವಾಡ್ ಸಖತ್ ಫಾರ್ಮ್ನಲ್ಲಿದ್ದಾರೆ. ಜೊತೆಗೆ ಧೋನಿ ಈ ಬಾರಿ ಐಪಿಎಲ್‌ಗೆ ನಿವೃತ್ತಿ ನೀಡುವ ಸಾಧ್ಯತೆ ಇರುವುದುರಿಂದ ಅವರಿಗೆ ಟ್ರಿಬ್ಯೂಟ್ ನೀಡುವ ಸಲುವಾಗಿ ಸಂಪೂರ್ಣ ತಂಡ ಕಪ್ ಗೆಲ್ಲುವ ಮಾತನಾಡುತ್ತಿದೆ.