ಆದರೆ ಈ ವೇಳೆ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ರಹಾನೆ ಅದ್ಬುತಗಳನ್ನು ಮಾಡಿ ತೋರಿಸಿದ್ದರು. ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿ ಮಿಂಚಿದ್ದರು. ಆ ಬಳಿಕ ಮೂರನೇ ಟೆಸ್ಟ್ ಡ್ರಾ ದೊಂದಿಗೆ ಅಂತ್ಯವಾಗಿತ್ತು. ಸರಣಿಯ ನಿರ್ಣಾಯಕ 4ನೇ ಟೆಸ್ಟ್ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಸರಣಿ ಗೆಲುವು ಪಡೆದುಕೊಂಡಿತ್ತು.
ಈ ಆವೃತ್ತಿಯಲ್ಲಿ ಇದುವರೆಗೂ ಐದು ಪಂದ್ಯಗಳನ್ನು ಆಡಿರುವ ರಹಾನೆ 209 ರನ್ ಗಳಿಸಿದ್ದಾರೆ. 199.05ರ ಸ್ಟ್ರೇಕ್ ರೇಟ್ನಲ್ಲಿ ರನ್ ಗಳಿಸಿರುವುದು ವಿಶೇಷವಾಗಿದೆ. ಸದ್ಯ ಸಿಎಸ್ಕೆಗೆ ಸಿಕ್ಕ ಅಮೂಲ್ಯ ರತ್ನವಾಗಿ ರಹಾನೆ ಕಾಣುತ್ತಿದ್ದಾರೆ. ಇದೇ ವೇಳೆ ರಹಾನೆಯನ್ನು ಕೈಬಿಟ್ಟಿದ್ದಕ್ಕೆ ಕೆಕೆಆರ್ ಕೈಕೈ ಇಚುಕಿಕೊಳ್ಳುತ್ತಿದೆ. ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲೇ ರಹಾನೆ 71 ರನ್ ಗಳಿಸಿ ಮಿಂಚಿದ್ದರು.