MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

IPL 2023: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರ ಮೊದಲ ಪಂದ್ಯದಲ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ದಾಖಲಿಸಿದ್ದಾರೆ.

First published:

  • 18

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರ ಮೊದಲ ಪಂದ್ಯದಲ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ದಾಖಲಿಸಿದ್ದಾರೆ. ಧೋನಿ ಗುಜರಾತ್ ಟೈಟಾನ್ಸ್ ವಿರುದ್ಧ 200 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದರು.

    MORE
    GALLERIES

  • 28

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಈ ಸಮಯದಲ್ಲಿ, ಅವರು ಐರ್ಲೆಂಡ್‌ನ ವೇಗದ ಬೌಲರ್ ಜೋಶುವಾ ಲಿಟಲ್ ಅವರ ಬಾಲ್‌ನಲ್ಲಿ ಸಿಕ್ಸ ಬಾರಿಸುವುದರೊಂದಿಗೆ ಮಹಿ ಐಪಿಎಲ್‌ನಲ್ಲಿ ದೊಡ್ಡ ಸಾಧನೆ ಮಾಡಿದರು. ಇದರೊಂದಿಗೆ ಧೋನಿ ಐಪಿಎಲ್‌ನಲ್ಲಿ ಯಾವುದೇ ಒಂದು ತಂಡಕ್ಕಾಗಿ 200 ಸಿಕ್ಸರ್‌ ಸಿಡಿಸಿದ ಆಟಗಾರರ ಪಟ್ಟಿಗೆ ಸೇರಿದರು.

    MORE
    GALLERIES

  • 38

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಮಾಹಿ ಈ ಸಾಧನೆ ಮಾಡಿದ ಸಿಎಸ್‌ಕೆಯ ಮೊದಲ ಬ್ಯಾಟ್ಸ್‌ಮನ್. ಈ ವೇಳೆ ಅವರು ವಿರಾಟ್ ಕೊಹ್ಲಿ ಅವರ ಎಲೈಟ್ ಕ್ಲಬ್‌ನಲ್ಲಿಯೂ ಸ್ಥಾನ ಪಡೆದರು. ಐಪಿಎಲ್‌ನಲ್ಲಿ ಯಾವುದೇ ಒಂದು ತಂಡಕ್ಕಾಗಿ 200 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಒಟ್ಟಾರೆ 5ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಒಟ್ಟು 230 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

    MORE
    GALLERIES

  • 48

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಐಪಿಎಲ್‌ನಲ್ಲಿ ಯಾವುದೇ ಒಂದು ತಂಡದ ವಿರುದ್ಧ 200 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಕೀರಾನ್ ಪೊಲಾರ್ಡ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 58

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಇದರ ಜೊತೆಗೆ ಗುಜರಾತ್​ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್​ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಧೋನಿಗೆ ಈಗ 41 ವರ್ಷ 250 ದಿನ ವಯಸ್ಸಾಗಿದೆ.

    MORE
    GALLERIES

  • 68

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಇದಕ್ಕೂ ಮೊದಲು ಐಪಿಎಲ್​ನ ಅತ್ಯಂತ ಹಿರಿಯ ನಾಯಕ ಎಂಬ ರೆಕಾರ್ಡ್​ ಶೇನ್ ವಾರ್ನ್​ ಹೆಸರಿನಲ್ಲಿತ್ತು. ಅವರು 2011 ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ರಾಜಸ್ಥಾನ್ ತಂಡದ ನಾಯಕರಾಗಿದ್ದರು. ಇದೀಗ ಈ ದಾಖಲೆಯನ್ನು ಮಹಿ ಮುರಿದಿದ್ದಾರೆ.

    MORE
    GALLERIES

  • 78

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    ಕೇವಲ ಹಿರಿಯ ನಾಯಕ ಮಾತ್ರವಲ್ಲದೇ ಐಪಿಎಲ್​ ಟ್ರೋಫಿ ಗೆದ್ದ ಹಿರಿಯ ನಾಯಕ ಎಂಬ ದಾಖಲೆಯನ್ನೂ ಧೋನಿ ಹೊಂದಿದ್ದಾರೆ. ಹೌದು, 2021 ರಲ್ಲಿ ಸಿಎಸ್​ಕೆ ಕಪ್​ ಗೆದ್ದಾಗ ಧೋನಿಗೆ 40 ವರ್ಷ, 70 ದಿನ ವಯಸ್ಸಾಗಿತ್ತು.

    MORE
    GALLERIES

  • 88

    MS Dhoni: ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್​ ಕೂಲ್​

    41 ವರ್ಷದ ಧೋನಿಗೆ ಈ ಐಪಿಎಲ್​ ಕೊನೆಯ ಸೀಸನ್​ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಧೋನಿ ಯಾವುದೇ ರೀತಿಯ ಮಾಹಿತಿಯನ್ನೂ ಈವರೆಗೆ ಬಿಟ್ಟುಕೊಟ್ಟಿಲ್ಲ.

    MORE
    GALLERIES