ಕಳೆದ ವರ್ಷ ಐಪಿಎಲ್ ಆರಂಭಕ್ಕೆ ಸರಿಯಾಗಿ 10 ದಿನಗಳ ಮೊದಲು ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರು. ರವೀಂದ್ರ ಜಡೇಜಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಆ ಬಳಿಕ ಜಡೇಜಾ ನಾಯಕನಾಗಿ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅರ್ಧ ಪಂದ್ಯಗಳ ನಂತರ ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಅದರೊಂದಿಗೆ ಧೋನಿ ಮತ್ತೊಮ್ಮೆ ನಾಯಕನಾಗಿ ಕಾರ್ಯನಿರ್ವಹಿಸಿದರು.