IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

IPL 2023: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಕುತೂಹಲಕಾರಿ ಹೋರಾಟ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಆರ್​ಸಿಬಿ ವಿರುದ್ಧ 8 ರನ್​ಗಳ ರೋಚಕ ಜಯ ಸಾಧಿಸಿತು. ಆದರೆ ಆರ್​ಸಿಬಿಗೆ ಈ ಪಂದ್ಯದಲ್ಲಿ ಮೋಸವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

First published:

  • 18

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಐಪಿಎಲ್ 2023 ಆಸಕ್ತಿದಾಯಕ ಪಂದ್ಯಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ಮೊದಲ ವಾರದ ಪಂದ್ಯಗಳು ಏಕಪಕ್ಷೀಯವಾಗಿದ್ದರೆ, ಎರಡನೇ ವಾರದ ರೋಚಕ ಪಂದ್ಯಗಳು ಅಭಿಮಾನಿಗಳನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುತ್ತಿವೆ.

    MORE
    GALLERIES

  • 28

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಎರಡನೇ ವಾರದಿಂದ ಬಹುತೇಕ ಎಲ್ಲಾ ಪಂದ್ಯಗಳು ಕೊನೆಯ ಎಸೆತದವರೆಗೂ ಫಲಿತಾಂಶದ ನಿರೀಕ್ಷೆಯನ್ನು ಹುಟ್ಟುಹಾಕುತ್ತಿವೆ. ಈ ಅನುಕ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಸಹ ಕುತೂಹಲಕಾರಿ ಹೋರಾಟವೂ ನಡೆಯಿತು.

    MORE
    GALLERIES

  • 38

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 226 ರನ್ ಗಳಿಸಿತು. ಡೆವೊನ್ ಕಾನ್ವೆ 83ರನ್, ಶಿವಂ ದುಬೆ 52 ರನ್ ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಆ ಮೂಲಕ ಚೆನ್ನೈ ಬೃಹತ್ ಸ್ಕೋರ್ ಮಾಡಿತು.

    MORE
    GALLERIES

  • 48

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 218 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಉತ್ತಮ ಬ್ಯಾಟಿಂಗ್​ ಮಾಡಿದರು. ಆದರೆ, ಇವರಿಬ್ಬರನ್ನು ಬಿಟ್ಟರೆ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ. ಅದರಂತೆ ಚೆನ್ನೈ ಪರ ತುಷಾರ್ ದೇಶ್ ಪಾಂಡೆ 3 ವಿಕೆಟ್ ಪಡೆದರು. ಪತಿರಾನ 2 ವಿಕೆಟ್ ಪಡೆದು ಮಿಂಚಿದರು.

    MORE
    GALLERIES

  • 58

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಆದರೆ, ಈ ಪಂದ್ಯದಲ್ಲಿ ಅಂಪೈರ್‌ಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಜಡೇಜಾ ಬೌಲ್ ಮಾಡಿದ 15ನೇ ಓವರ್‌ನ 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ನೇರವಾಗಿ ಧೋನಿ ಕೈ ಸೇರಿತು. ತಕ್ಷಣವೇ ಧೋನಿ ವಿಕೆಟ್ ಕಬಳಿಸಿ ಸ್ಟಂಪ್ ಔಟ್ ಗೆ ಮನವಿ ಮಾಡಿದರು.

    MORE
    GALLERIES

  • 68

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಇದರೊಂದಿಗೆ ಲೆಗ್ ಅಂಪೈರ್ ಮೂರನೇ ಅಂಪೈರ್‌ಗೆ ವರದಿ ಸಲ್ಲಿಸಿದರು. ಮೂರನೇ ಅಂಪೈರ್ ಟಿವಿ ರಿಪ್ಲೇ ನೋಡಿದಾಗ, ಧೋನಿ ಸ್ಟಂಪ್​ ಔಟ್​ ಮಾಡಿದಾಗ ದಿನೇಶ್ ಕಾರ್ತಿಕ್ ಅವರ ಕಾಲು ಕ್ರೀಸ್‌ನಲ್ಲಿತ್ತು. ಅದನ್ನು ನಾಟೌಟ್ ಎಂದು ಘೋಷಿಸಿದರು.

    MORE
    GALLERIES

  • 78

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಆದರೆ, ಧೋನಿ ವಾಸ್ತವವಾಗಿ ಸ್ಟಂಪ್ ಲೈನ್‌ನ ಮೊದಲು ಚೆಂಡನ್ನು ಹಿಡಿದುಕೊಂಡಿದ್ದರು. ಚೆಂಡನ್ನು ಸಂಗ್ರಹಿಸುವ ಸಮಯದಲ್ಲಿ ಧೋನಿಯ ಕೈಗವಸುಗಳು ಸ್ಟಂಪ್ ಲೈನ್‌ನ ಹೊರಗಿದ್ದವು. ಆದರೆ ಪಂದ್ಯದ ಬಳಿಕ ಸ್ಕ್ರೀನ್‌ ಶಾಟ್​ ಅನ್ನು ಹಂಚಿಕೊಳ್ಳುವ ಮೂಲಕ ಕೈಗವಸುಗಳು ಸ್ಟಂಪ್ ಲೈನ್‌ಗಿಂತ ಮೊದಲು ಇವೆ ಎಂದು ಹೇಳುವ ಮೂಲಕ ಆರ್​ಸಿಬಿಗೆ ಅಂಪೈರ್​ ಮತ್ತೆ ಮೋಸ ಮಾಡಿದ್ದಾರೆ. ಇದ ನೋ ಬಾಲ್​ ಆಗಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 88

    IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?

    ಇದನ್ನು ಅಂಪೈರ್ ಹೆಚ್ಚು ಸೂಕ್ಷ್ಮವಾಗಿ ಗಮನಿಸಿದ್ದರೆ ನೋ ಬಾಲ್ ಎಂದು ಹೇಳಲಿಲ್ಲ ಎಂದು ಆರ್‌ಸಿಬಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಹಾಗೇನಾದರೂ ಆಗಿದ್ದರೆ ಖಂಡಿತ ಗೆಲ್ಲುತ್ತಿದ್ದೆವು ಎಂದೂ ಹೇಳಲಾಗುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ 8 ರನ್‌ಗಳಿಂದ ಸೋತಿತ್ತು.

    MORE
    GALLERIES