ಈ ಕ್ರಮದಲ್ಲಿ ಮುಂದಿನ ವರ್ಷ ಐಪಿಎಲ್ ನಲ್ಲಿ ಧೋನಿ ಹೊರತಾಗಿ ಮತ್ತೊಬ್ಬ ಯುವ ಆಟಗಾರ ಚೆನ್ನೈ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿದ್ದ ರುತುರಾಜ್ ಗಾಯಕ್ವಾಡ್ ಅವರಿಗೆ ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸುವ ಸಾಧ್ಯತೆ ಇದೆ. ಅಲ್ಲದೇ ಗಾಯಕ್ವಾಡ್ ಅವರನ್ನು ಪ್ರಾಂಚೈಸಿ ಆಯ್ಕೆ ಮಾಡುವ ಕುರಿತು ಮೈಕಲ್ ಹಸ್ಸಿ ಸಹ ಒಂದು ಸುಳಿವನ್ನು ನೀಡಿದ್ದಾರೆ.