IPL 2023 Mini Auction: ಹಾಟ್ ಸ್ಟಾರ್ನಲ್ಲಿ ಲೈವ್ ನೋಡೋಕಾಗಲ್ಲ! IPL ಮಿನಿ ಹರಾಜನ್ನು ಉಚಿತವಾಗಿ ಈ ಆ್ಯಪ್ ಮೂಲಕ ವೀಕ್ಷಿಸಿ
IPL 2023 Mini Auction: ಐಪಿಎಲ್ 2023ರ 10 ಫ್ರಾಂಚೈಸಿಗಳು ಸೇರಿದಂತೆ 87 ಸ್ಲಾಟ್ಗಳು ಖಾಲಿ ಇವೆ. ಅಂದರೆ ಡಿಸೆಂಬರ್ 23ರ ಹರಾಜಿನಲ್ಲಿ 405 ಆಟಗಾರರ ಪೈಕಿ ಗರಿಷ್ಠ 87 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 16ನೇ ಆವೃತ್ತಿಗೆ ಆಟಗಾರರ ಹರಾಜಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿ ಹರಾಜಿನಲ್ಲಿ 273 ಭಾರತೀಯ ಹಾಗೂ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರು ಭಾಗವಹಿಸಲಿದ್ದಾರೆ.
2/ 8
ಡಿಸೆಂಬರ್ 23ರಂದು, ಆಟಗಾರರ ಹರಾಜು (IPL 2023 Mini Auction) ಕೊಚ್ಚಿಯಲ್ಲಿ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದನ್ನು ಖಚಿತಪಡಿಸಿದೆ.
3/ 8
ಐಪಿಎಲ್ನಲ್ಲಿ 10 ಫ್ರಾಂಚೈಸಿಗಳು ಸೇರಿದಂತೆ 87 ಸ್ಲಾಟ್ಗಳು ಖಾಲಿ ಇವೆ. ಅಂದರೆ ಡಿಸೆಂಬರ್ 23ರ ಹರಾಜಿನಲ್ಲಿ 405 ಆಟಗಾರರ ಪೈಕಿ ಗರಿಷ್ಠ 87 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ.
4/ 8
ಈ ಮಿನಿ ಹರಾಜು ಡಿಸೆಂಬರ್ 23 ರಂದು (ಗುರುವಾರ) ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಲಿದೆ. ಅಭಿಮಾನಿಗಳು ಈ ಮಿನಿ ಹರಾಜನ್ನು ಎಲ್ಲಿ ಮತ್ತು ಯಾವ ಚಾನಲ್ನಲ್ಲಿ ನೋಡಬಹುದು ಎಂಬ ಮಾಹಿತಿ ಇಲ್ಲಿದೆ.
5/ 8
ಟಿವಿಯಲ್ಲಿ ವೀಕ್ಷಿಸಲು ಬಯಸುವವರು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ನಲ್ಲಿ ಮಿನಿ ಹರಾಜನ್ನು ಲೈವ್ ಆಗಿ ವೀಕ್ಷಿಸಬಹುದು. ಆದರೆ ಹಾಟ್ ಸ್ಟಾರ್ ಲೈವ್ ಈ ಬಾರಿ ಡಿಜಿಟಲ್ ಪ್ರಸಾರವನ್ನು ಪ್ರಸಾರ ಮಾಡುತ್ತಿಲ್ಲ.
6/ 8
ಡಿಜಿಟಲ್ ಪ್ಲಾಟ್ಫಾರ್ಮ್ ಜಿಯೋ ಸಿನಿಮಾ ಈ ಮಿನಿ ಹರಾಜನ್ನು ನೇರ ಪ್ರಸಾರ ಮಾಡುತ್ತದೆ. ಜಿಯೋ ಬಳಕೆದಾರರು ಜಿಯೋ ಸಿನಿಮಾ ಆ್ಯಪ್ನ್ನು ಡೌನ್ಲೋಡ್ ಮಾಡಬಹುದು ಮತ್ತು ಒಂದು ರೂಪಾಯಿ ಪಾವತಿಸದೆ ಉಚಿತವಾಗಿ ಮಿನಿ ಹರಾಜನ್ನು ಲೈವ್ ಆಗಿ ವೀಕ್ಷಿಸಬಹುದು.
7/ 8
FIFA ವರ್ಲ್ಡ್ ಕಪ್ 2022 ಭಾರತದಲ್ಲಿ ಜಿಯೋ ಸಿನಿಮಾದಿಂದ ಡಿಜಿಟಲ್ ಟೆಲಿಕಾಸ್ಟ್ ಮಾಡಲಾಗಿತ್ತು. ಫಿಫಾ ವಿಶ್ವಕಪ್ ಪಂದ್ಯಗಳನ್ನು ಟಿವಿಗಿಂತ ಜಿಯೋ ಸಿನಿಮಾ ಆ್ಯಪ್ ಮೂಲಕ ಹೆಚ್ಚು ಭಾರತೀಯರು ವೀಕ್ಷಿಸುತ್ತಿದ್ದಾರೆ ಎಂಬುದು ಗಮನಾರ್ಹ.
8/ 8
ಜಿಯೋ ಸಿನಿಮಾ ಮೂಲಕ 11 ಕೋಟಿಗೂ ಹೆಚ್ಚು ಭಾರತೀಯರು ಈ ತಿಂಗಳು ನಡೆದ ಫುಟ್ಬಾಲ್ ವಿಶ್ವಕಪ್ ಕದನವನ್ನು ವೀಕ್ಷಿಸಿದ್ದಾರೆ. ಮುಂದಿನ ವರ್ಷದ ಐಪಿಎಲ್ ಕೂಡ ಜಿಯೋ ಸಿನಿಮಾದಲ್ಲಿ ನೇರ ಪ್ರಸಾರವಾಗಲಿದೆ.