IPL 2023 Auction New Rules: ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಶಾಕ್, ಈ ನಿಯಮಗಳನ್ನು ಪಾಲಿಸಲೇಬೇಕು!
IPL 2023 Mini Auction New Rules: ಐಪಿಎಲ್ 16 ನೇ ಆವೃತ್ತಿಯ ಆಟಗಾರರ ಹರಾಜು ಕೇರಳದ ಕೊಚ್ಚಿಯಲ್ಲಿ 23 ರಂದು ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಈ ಬಾರಿ ಐಪಿಎಲ್ ಫ್ರಾಂಚೈಸಿಗಳಿಗೆ ಹೊಸ ನಿಯಮಗಳನ್ನು ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 16ನೇ ಆವೃತ್ತಿಗೆ ಆಟಗಾರರ ಹರಾಜಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿ ಹರಾಜಿನಲ್ಲಿ 273 ಭಾರತೀಯ ಹಾಗೂ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರು ಭಾಗವಹಿಸಲಿದ್ದಾರೆ.
2/ 8
ಡಿಸೆಂಬರ್ 23ರಂದು, ಆಟಗಾರರ ಹರಾಜು (IPL 2023 Mini Auction) ಕೊಚ್ಚಿಯಲ್ಲಿ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದನ್ನು ಖಚಿತಪಡಿಸಿದೆ.
3/ 8
ಐಪಿಎಲ್ ಮಿನಿ ಹರಾಜಿಗೂ ಮುನ್ನ ಬಿಸಿಸಿಐ ಎಲ್ಲಾ ಫ್ರಾಂಚೈಸಿ 6 ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಇದು ಹಾರಜಿನಲ್ಲಿ ಆಟಗಾರರ ಬಿಡ್ಡಿಂಗ್ಗೆ ಹೆಚ್ಚು ಸಂಬಂಧಿಸಿದೆ.
4/ 8
ಅದಂತೆ ಫ್ರಾಂಚೈಸಿಗಳು ಪ್ರಮುಖವಾಗಿ, ತಮ್ಮ ಬಳಿ ಉಳಿದಿರುವ (95 ಕೋಟಿ ರೂ. ನಿಗದಿಪಡಿಸಲಾಗಿತ್ತು) ಹಣಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವಂತಿಲ್ಲ. ಆದರೆ ಲಭ್ಯವಿರುವ 75 ಶೇಕಡಾ ಹಣವನ್ನು ಮಾತ್ರ ಬಳಸಬಹುದಾಗಿದೆ.
5/ 8
ಈ ಬಾರಿಯ ಹರಾಜಿನಲ್ಲಿ ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ ಕಾರ್ಡ್ನ್ನು ಬಳಸುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಜೊತೆಗೆ ಪತ್ರಯೊಂದು ತಂಡವು ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರನ್ನು ಹೊಂದಿರಬಹುದು.
6/ 8
ಈ ರೀತು ಇರುವ ಆಟಗಾರರರಲ್ಲಿ ಪ್ರತಿ ತಂಡದಲ್ಲಿಯೂ ಕನಿಷ್ಠ 17 ಹಾಗೂ ಗರಿಷ್ಠ 25 ಭಾರತೀಯ ಪ್ಲೇಯರ್ಸ್ ಇರಲೇಬೇಕು. ಅಲ್ಲದೇ ಪ್ರತಿಯೊಂದು ತಂಡವೂ ಸಹ ಗರಿಷ್ಠ 8 ವಿದೇಶಿ ಆಟಗಾರರನ್ನು ಹೊಂದಿರಬಹುದಾಗಿದೆ ಎಂದು ಬಿಸಿಸಿಐ ಐಪಿಎಲ್ ನಿಯಮವನ್ನು ತಿಳಿಸಿದೆ.
7/ 8
ಇನ್ನು, ಮಿನಿ ಹರಾಜಿನ ಕುರಿತು ನೋಡುವುದಾದರೆ, 23 ಡಿಸೆಂಬರ್ 2022 ರಂದು ಐಪಿಎಲ್ 16ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕೇರಳದ ಕೊಚ್ಚಿ ನಗರದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.
8/ 8
ಐಪಿಎಲ್ 2023 ಹರಾಜಿನ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೋಡಬಹುದು. ಅಲ್ಲದೇ ಲೈವ್ ಸ್ಟ್ರೀಮಿಂಗ್ ಅನ್ನು JioCinema ಅಪ್ಲಿಕೇಶನ್ನಲ್ಲಿ ನೋಡಬಹುದು.