IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

IPL 2023: ಐಪಿಎಲ್​ ಎಂಬ ಚುಟುಕು ಕ್ರಿಕೆಟ್​ 2008ರಲ್ಲಿ ಆರಂಬವಾಯಿತು. ಅಂದಿನಿಂದ ಇಂದಿನವರೆಗೂ ತನ್ನದೇ ಅಭಿಮಾನಿಗಳ ಬಳಗ ಹೊಂದಿರುವ ಲೀಗ್​ ಆಗಿದೆ. ಈ ಮೆಗಾ ಟೂರ್ನಿಗೆ ಇಂದು ವಿಶೇಷ ದಿನವಾಗಿದೆ.

First published:

  • 17

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    ಐಪಿಎಲ್ ಮತ್ತೊಂದು ಮೈಲಿಗಲ್ಲು ತಲುಪಿದೆ. ಇಂದು ಐಪಿಎಲ್​ನ 1000ನೇ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ ಈ ಕಾರ್ಯಕ್ರಮಕ್ಕೆ ವೇದಿಕೆಯಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಐತಿಹಾಸಿಕ ಕದನದಲ್ಲಿ ಮುಖಾಮುಖಿಯಾಗಲಿವೆ.

    MORE
    GALLERIES

  • 27

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    1000ನೇ ಪಂದ್ಯವನ್ನು ಗುರುತಿಸಲು ಬಿಸಿಸಿಐ ವಿಶೇಷ ಸಮಾರಂಭವನ್ನು ನಡೆಸಲಿದೆ. 15 ನಿಮಿಷಗಳ ಕಾರ್ಯಕ್ರಮದಲ್ಲಿ ಐಪಿಎಲ್ ಫ್ಲ್ಯಾಗ್ ಮಾರ್ಚ್ ನಡೆಯಲಿದೆ. ನಂತರ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ರವಿಶಾಸ್ತ್ರಿ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    MORE
    GALLERIES

  • 37

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    ಇದೇ ವೇಳೆ ಐಪಿಎಲ್​ ಕುರಿತು ಆಟಗಾರರ ಸಂದೇಶಗಳ ವೀಡಿಯೊಗಳನ್ನು ಪ್ಲೇ ಮಾಡುತ್ತಾರೆ. ನಂತರ ಬಿಸಿಸಿಐ ಪದಾಧಿಕಾರಿಗಳು ಮುಂಬೈ ಇಂಡಿಯನ್ಸ್-ರಾಜಸ್ಥಾನ್ ರಾಯಲ್ಸ್ ತಂಡಗಳ ನಾಯಕರಿಗೆ ಸ್ಮರಣಿಕೆಯನ್ನು ನೀಡಲಿದ್ದಾರೆ. ಅಂತಿಮವಾಗಿ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಸಮಾರಂಭವು ಕೊನೆಗೊಳ್ಳುತ್ತದೆ.

    MORE
    GALLERIES

  • 47

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    15 ವರ್ಷಗಳ ಹಿಂದೆ 2008ರಲ್ಲಿ ಲಲಿತಾ ಮೋದಿ ಐಪಿಎಲ್ ಎಂಬ ಟಿ20 ಲೀಗ್ ಅನ್ನು ವಿನ್ಯಾಸಗೊಳಿಸಿದ್ದರು. ಇದು ಕ್ರಿಕೆಟ್‌ನ ಸ್ವರೂಪವನ್ನೇ ಬದಲಿಸಿತು. ಆಟಗಾರರ ಜತೆಗೆ ಫ್ರಾಂಚೈಸಿಗಳು ಹಾಗೂ ಬಿಸಿಸಿಐಗೆ ಹಣದ ಸುರಿಮಳೆಯಾಯಿತು.

    MORE
    GALLERIES

  • 57

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    ಹಾರ್ದಿಕ್ ಪಾಂಡ್ಯ, ಬುಮ್ರಾ ಅವರಂತಹ ಆಟಗಾರರು ಭಾರತ ತಂಡಕ್ಕೆ ಬರಲು ಐಪಿಎಲ್ ನೆರವಾಗಿದೆ. ರಾಷ್ಟ್ರೀಯ ತಂಡದ ಗೆಲುವಿಗೆ ಐಪಿಎಲ್ ನೆರವಾಗಿದೆ. ಅಲ್ಲಿಯವರೆಗೂ ರಣಜಿಗಳನ್ನು ಮಾತ್ರ ಪ್ರತಿಭೆಯ ಅಳತೆಗೋಲು ಎಂದು ಪರಿಗಣಿಸಲಾಗುತ್ತಿತ್ತು.

    MORE
    GALLERIES

  • 67

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    ಐಪಿಎಲ್ ಆಗಮನದಿಂದ ದೃಶ್ಯ ಬದಲಾಗಿದೆ. ಟಿ20 ಪಂದ್ಯಗಳು ಹೆಚ್ಚೆಚ್ಚು ನಡೆಯುತ್ತಿರುವುದರಿಂದ ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಆಡುವ ಮೂಲಕ ಯುವಕರು ರಾಷ್ಟ್ರೀಯ ತಂಡಕ್ಕೆ ಬರುತ್ತಿದ್ದಾರೆ.

    MORE
    GALLERIES

  • 77

    IPL 2023: ಸಾವಿರ ಪಂದ್ಯ, ಒಂದೇ ಭಾವನೆ; ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಐಪಿಎಲ್, ನಿಮ್ಮ ಫೆವರೇಟ್​ ಟೀಂ ಯಾವ್ದು?

    ಯುವ ಆಟಗಾರರಿಗಷ್ಟೇ ಅಲ್ಲ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಹಿರಿಯ ಆಟಗಾರರಿಗೂ ಈ ಲೀಗ್ ವರದಾನವಾಗಿ ಪರಿಣಮಿಸಿದೆ. ರಹಾನೆ ಇತ್ತೀಚೆಗೆ ಡಬ್ಲ್ಯುಟಿಸಿ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಟಿ20ಗೆ ದಿನೇಶ್ ಕಾರ್ತಿಕ್ ಮರು ಪ್ರವೇಶ ಮಾಡಿರುವುದು ಇದನ್ನು ಸ್ಪಷ್ಟಪಡಿಸುತ್ತದೆ.

    MORE
    GALLERIES