ಮುಂಬೈ ಇಂಡಿಯನ್ಸ್ 5 ಬಾರಿ ದಾಖಲೆಯ ಐಪಿಎಲ್ ಪ್ರಶಸ್ತಿ ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಗೆದ್ದಿದೆ. ಮೊದಲ ಫೈನಲ್ 2010 ರಲ್ಲಿ ಮುಂಬೈ ಮತ್ತು ಚೆನ್ನೈ ನಡುವೆ ನಡೆದಿತ್ತು. ಆಗ ಸಿಎಸ್‌ಕೆ 22 ರನ್‌ಗಳಿಂದ ಗೆದ್ದಿತ್ತು. ಮೊದಲು ಆಡುವ ವೇಳೆ ಚೆನ್ನೈ 5 ವಿಕೆಟ್‌ಗೆ 168 ರನ್ ಗಳಿಸಿತ್ತು. ಸುರೇಶ್ ರೈನಾ 57 ರನ್ ಗಳಿಸಿ ಅಜೇಯರಾಗುಳಿದರು. ಇದಕ್ಕೆ ಉತ್ತರವಾಗಿ ಮುಂಬೈ ತಂಡ 146 ರನ್ ಗಳಿಸಲಷ್ಟೇ ಶಕ್ತವಾಯಿತು.