IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

IPL 2023: ಆರ್​ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯ ಆಟಕ್ಕಿಂತ ಹೆಚ್ಚಾಗಿ ಉಳಿದ ವಿಷಗಳಿಂದ ಚರ್ಚೆಯಲ್ಲಿವೆ. ಹೌದು, ಆರ್‌ಸಿಬಿ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ವಿರಾಟ್ ಕೊಹ್ಲಿ ಮತ್ತು ಗಂಭೀರ್​ ನಡುವಿನ ಜಗಳ. ಆದರೆ ಅದು ಈಗಲೂ ಮುಂದುವರೆಯುತ್ತಿದೆ.

First published:

  • 17

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಆರ್​ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯ ಆಟಕ್ಕಿಂತ ಹೆಚ್ಚಾಗಿ ಉಳಿದ ವಿಷಗಳಿಂದ ಚರ್ಚೆಯಲ್ಲಿವೆ. ಹೌದು, ಆರ್‌ಸಿಬಿ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ವಿರಾಟ್ ಕೊಹ್ಲಿ ಮತ್ತು ಎಲ್ಎಸ್‌ಜಿ ತಂಡದ ಬೌಲರ್ ನವೀನ್-ಉಲ್-ಹಕ್ ಮತ್ತು ತಂಡದ ಮೆಂಟರ್ ಆದ ಗೌತಮ್ ಗಂಭೀರ್ ನಡುವಿನ ವಾಗ್ವಾದ.

    MORE
    GALLERIES

  • 27

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಆದರೆ ಈ ಜಗಳ ಕೇವಲ ಮೈದಾದಲ್ಲಿ ಮುಗಿಯದೇ ಬಳಿಕ ಸಾಮಾಜಿಕ ಜಾಲತಾಣದಲ್ಲಿಯೂ ಮುಂದುವರೆಯಿತು. ಪಂದ್ಯದ ಮರುದಿನ ಕೊಹ್ಲಿ ಮತ್ತು ನವೀನ್​-ಉಲ್​-ಹಕ್​ ಇಬ್ಬರೂ ಸಾಮಾಜಿಕ ಜಾಲತಾಣಗಳ ಮುಖಾಂತರ ಫೋಸ್ಟ್​ ಮಾಡುವ ಮೂಲಕ ಮತ್ತೆ ಸುದ್ದಿಯಾದರು.

    MORE
    GALLERIES

  • 37

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಇದೀಗ ಈ ಜಗಳ ಸದ್ಯಕ್ಕೆ ತಣ್ಣಗಾಗುವ ರೀತಿ ಕಾಣುತ್ತಿಲ್ಲ. ಏಕೆಂದರೆ ಲಕ್ನೋ ಸೂಪರ್​ ಜೈಂಟ್ಸ್ ತಂಡವು ಚೆನ್ನೈ ಸೂಪರ್​ ಕಿಂಗ್ಸ್ ಪಂದ್ಯದ ಬಳಿಕ ಟ್ವಿಟರ್​ನಲ್ಲಿ ಒಂದು ಫೋಸ್ಟ್ ಮಾಡಿದ್ದು, ಪರೋಕ್ಷವಾಗಿ ವಿರಾಟ್ ಕೊಹ್ಲಿಗೆ ಟಾಂಗ್​ ನೀಡಿದಂತಿದೆ.

    MORE
    GALLERIES

  • 47

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಹೌದು, ಬುಧವಾರ ಮಳೆಯಿಂದ ರದ್ದಾದ ಪಂದ್ಯದಲ್ಲಿ ಲಕ್ನೋ ಮತ್ತು ಚೆನ್ನೈ ತಂಡಗಳು ಸೆಣಸಾಡಿದವು. ಆದರೆ ಮಳೆಯ ಕಾರಣ ಪಂದ್ಯ ರದ್ದಾಗಿ ಉಭಯ ತಂಡಗಳಿಗೆ ತಲಾ 1 ಪಾಯಿಂಟ್​ ನೀಡಲಾಯಿತು.

    MORE
    GALLERIES

  • 57

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಇದಾದ ಬಳಿಕ ಲಕ್ನೋ ತಂಡದ ಆಟಗಾರರೆಲ್ಲಾ ಎಂ ಎಸ್ ಧೋನಿಯನ್ನು ಭೇಟಿ ಮಾಡಿದ್ದಾರೆ. ಇದರ ಫೋಟೋಗಳನ್ನು ಲಕ್ನೋ ಹಂಚಿಕೊಂಡಿದ್ದು, ಹೊಸ ವಿವಾದಕ್ಕೆ ಮುನ್ನುಡಿಯಾಗಿದೆ.

    MORE
    GALLERIES

  • 67

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಹೌದು, ಲಕ್ನೋ ತಂಡದ ಆಟಗಾರರು ಧೋನಿ ಜೊತೆ ಇರುವ ಪೋಟೋ ಹಂಚಿಕೊಂಡು ‘ಎಲ್ಲರೂ ಪಂದ್ಯ ಮುಗಿದ ಬಳಿಕ ಗೋಟ್​ ಅನ್ನು ಭೇಟಿಯಾಗಲು ಬಯಸುತ್ತಾರೆ‘ (Everyone loves a post-match meeting with the GOT) ಎಂದು ಬರೆದುಕೊಂಡಿದೆ.

    MORE
    GALLERIES

  • 77

    IPL 2023: ಮತ್ತೆ ವಿರಾಟ್ ಕೆಣಕಿದ ಲಕ್ನೋ; ಕರ್ಮ ಬಿಟ್ರೂ, ಕಿಂಗ್​ ಕೊಹ್ಲಿ ಬಿಡಲ್ಲ ಎಂದ ಫ್ಯಾನ್ಸ್!

    ಈ ಫೋಟೋದಲ್ಲಿ ವಿರಾಟ್ ಜೊತೆಗೆ ಜಗಳವಾಡಿದ್ದ, ನವೀನ್​-ಉಲ್​-ಹಕ್​, ಆವೇಶ್​ ಖಾನ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಲಕ್ನೋ ಪರೋಕ್ಷವಾಗಿ ವಿರಾಟ್ ಕೊಹ್ಲಿ ಕಾಲೆಳೆದಿದೆ. ಅದರಲ್ಲಿಯೂ ಕೆಎಲ್​ ರಾಹುಲ್​ ಅವರು ನವೀನ್​ ಬಳಿಕ ಕೊಹ್ಲಿ ಜೊತೆ ಸಂಧಾನ ಮಾಡಿಸಲು ಕರೆದಾಗಲೂ ನವೀನ್​ ಬಂದಿರಲಿಲ್ಲ.

    MORE
    GALLERIES