ಪಂದ್ಯದ ವಿವರ: ಲಕ್ನೋ ಮತ್ತು ಆರ್ಸಿಬಿ ಪಂದ್ಯವು ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಇಂದಿನ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್ವೆರ್ಕ್ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು. ಮೊಬೈಲ್ ಅಥವಾ ಡಿಜಿಟಲ್ ಲೈಟ್ ಸ್ಟ್ರೀಮಿಂಗ್ನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ.
ಹೆಡ್ ಟು ಹೆಡ್ ದಾಖಲೆ: ಕಳೆದ ಸೀಸನ್‌ನಲ್ಲಿ ಅಂದರೆ ಐಪಿಎಲ್‌ನ 15ನೇ ಋತುವಿನಲ್ಲಿ ಇಬ್ಬರೂ ಎರಡು ಬಾರಿ ಮುಖಾಮುಖಿಯಾಗಿದ್ದರು, ಅಲ್ಲಿ ಲೀಗ್ ಹಂತದಲ್ಲಿ ಆಡಿದ ಪಂದ್ಯದಲ್ಲಿ RCB ಲಕ್ನೋವನ್ನು 18 ರನ್‌ಗಳಿಂದ ಸೋಲಿಸಿತು. ಕಳೆದ ವರ್ಷ ಎಲಿಮಿನೇಟರ್‌ನಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದರು, ಅಲ್ಲಿ ಬೆಂಗಳೂರು 14 ರನ್‌ಗಳಿಂದ ಗೆದ್ದಿತ್ತು. ಜೊತೆಗೆ ಈ ಸೀಸನ್‌ನಲ್ಲಿ ಒಮ್ಮೆ ಮುಖಾಮುಖಿ ಆಗಿದ್ದು, ಈ ವೇಳೆ ಲಕ್ನೋ ಗೆದ್ದಿದೆ.
ಲಕ್ನೋ ಪಂದ್ಯದಲ್ಲಿ ಆರ್ಸಿಬಿ ಪರ ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಸೀಸನ್ನ ಕಳೆದ 8 ಪಂದ್ಯಗಳಲ್ಲಿ ಹ್ಯಾಝಲ್ವುಡ್ ಆರ್ಸಿಬಿ ಪರ ಕಣಕ್ಕಿಳಿದಿರಲಿಲ್ಲ. ಗಾಯದ ಸಮಸ್ಯೆಯಿಂದ ಅವರು ತಂಡದಿಂದ ದೂರವಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನೀಡಿರುವ ವರದಿ ಪ್ರಕಾರ, ಹ್ಯಾಝಲ್ವುಡ್ ಮುಂದಿನ ಲಕ್ನೋ ವಿರುದ್ಧ ಕಣಕ್ಕಿಳಿಯಲು ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಆಡುವುದು ಖಚಿತ ಎಂದು ಹೇಳಲಾಗಿದೆ.