ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಇದುವರೆಗೂ 6 ಶತಕ ಸಿಡಿಸಿದ್ದು, ವಿಶೇಷ ಎಂದರೆ 2016 ಆವೃತ್ತಿಯೊಂದರಲ್ಲೇ ಕೊಹ್ಲಿ 4 ಶತಕ ಗಳಿಸಿದ್ದರು. 2016ರ ಏಪ್ರಿಲ್ 24ರಂದು ಗುಜರಾತ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ 63 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ್ದರು. ಆದರೆ ಪುಣೆ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಮೆಕಲಮ್, ದಿನೇಶ್ ಕಾರ್ತಿಕ್ ಆರ್ಸಿಬಿ ಸೋಲಿಗೆ ಕಾರಣವಾಗಿದ್ದರು.
ಬಳಿಕ 2016ರ ಮೇ 07 ರಂದು ಪುಣೆ ತಂಡದ ವಿರುದ್ಧ ಐಪಿಎಲ್ನಲ್ಲಿ 2ನೇ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿಸಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ ಗೆಲುವು ಪಡೆದಿತ್ತು. ಇದಾದ ಒಂದು ವಾರದ ಬಳಿ ಮೇ 14ರಂದು ಗುಜರಾತ್ ಲಯನ್ಸ್ ವಿರುದ್ಧ 55 ಎಸೆತಗಳಲ್ಲಿ 109 ರನ್ ಸಿಡಿಸಿ ಕೊಹ್ಲಿ ಶತಕಗಳಿಸಿದ್ದರು. ಈ ಪಂದ್ಯದಲ್ಲಿ ಎಬಿ ಡೆವಿಲಿಯರ್ಸ್ ಕೂಡ ಶತಕ ಗಳಿಸಿ ಮಿಂಚಿದ್ದರು.