IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

IPL 2023: ಕೆಲ ದಿನಗಳಲ್ಲಿ ಐಪಿಎಲ್​ 2023ರ ಹೊಸ ಸೀಸನ್​ ಆರಂಭವಾಗಲಿದೆ. ಈ ಮೆಗಾ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಲು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಇದರ ನಡುವೆ ಕೆಕೆಆರ್​ ತಂಡಕ್ಕೆ ಆಘಾತ ಎದುರಾಗಿದೆ.

First published:

  • 18

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಹೆಚ್ಚು ದಿನಳು ಬಾಕಿ ಉಳಿದಿಲ್ಲ. ಐಪಿಎಲ್ ಸೀಸನ್ 16ಕ್ಕೆ ಮೂರು ವಾರಗಳಿಗಿಂತ ಕಡಿಮೆ ಸಮಯವಿದೆ. ಈ ಧನಾಧನ್ ಲೀಗ್ ಮಾರ್ಚ್ 31 ರಿಂದ ಮೇ 28ರ ವರೆಗೆ ನಡೆಯಲಿದೆ.

    MORE
    GALLERIES

  • 28

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಲಭ್ಯವಿರುವ ಆಟಗಾರರೊಂದಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿವೆ. ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗಂಭೀರವಾಗಿ ಅಭ್ಯಾಸ ನಡೆಸುತ್ತಿದೆ. ಮುಂಬೈ ಇಂಡಿಯನ್ಸ್ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ ಮತ್ತು ತಮ್ಮ ಆಟಗಾರರೊಂದಿಗೆ ಪ್ರಚಾರ ಕಾರ್ಯಕ್ರಮದಲ್ಲಿ ನಿರತವಾಗಿದೆ.

    MORE
    GALLERIES

  • 38

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಪ್ರದರ್ಶನ ನೀಡಲಿಲ್ಲ. 2022 ರ ಋತುವಿನ ಮೊದಲು ನಡೆದ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತ್ತಾ ಬೃಹತ್ ಬೆಲೆಗೆ ಖರೀದಿಸಿತು. ಆದರೆ ಶ್ರೇಯಸ್ ಅಯ್ಯರ್ ನಾಯಕನಾಗಿ ಮಿಂಚಲು ಸಾಧ್ಯವಾಗಲಿಲ್ಲ.

    MORE
    GALLERIES

  • 48

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ತಂಡದಲ್ಲಿ ಭಾರಿ ಹಿಟ್ಟರ್ ಗಳಿದ್ದರೂ ಕೋಲ್ಕತ್ತಾಗೆ ನಿರೀಕ್ಷಿತ ಆಟವಾಡಲು ಸಾಧ್ಯವಾಗಲಿಲ್ಲ. ಆದರೆ 2023ರಲ್ಲಿ ಕಂಬ್ಯಾಕ್​ ಮಾಡಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಕ್ರಮದಲ್ಲಿ ಲ್ಯೂಕಿ ಫರ್ಗುಸನ್, ಶಾರ್ದುಲ್ ಠಾಕೂರ್ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರನ್ನು ತಂಡಕ್ಕೆ ಕರೆತರಲಾಗಿದೆ.

    MORE
    GALLERIES

  • 58

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ಆದರೆ ಸೀಸನ್‌ಗೂ ಮುನ್ನ ತಂಡವನ್ನು ಚಿಂತೆಗೀಡು ಮಾಡುವ ಸುದ್ದಿ ಬಂದಿದೆ. ನಾಯಕ ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ.

    MORE
    GALLERIES

  • 68

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ನಾಲ್ಕನೇ ಟೆಸ್ಟ್ ನಲ್ಲೂ ಅಂತಿಮ ತಂಡದಲ್ಲಿ ಸ್ಥಾನ ಪಡೆದರು. ಆದರೆ ವಿಚಿತ್ರವೆಂದರೆ ನಾಲ್ಕನೇ ದಿನದ ಆಟದಲ್ಲಿ ಅವರು ಬ್ಯಾಟಿಂಗ್‌ಗೆ ಬರಲಿಲ್ಲ. ಶ್ರೇಯಸ್ ಅಯ್ಯರ್ ಶನಿವಾರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ತಂಡದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಸ್ಕ್ಯಾನಿಂಗ್‌ಗೆ ಕಳುಹಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

    MORE
    GALLERIES

  • 78

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ಆದರೆ ಸ್ಕ್ಯಾನಿಂಗ್ ವರದಿಗಳು ಇನ್ನಷ್ಟೇ ಬರಬೇಕಿದೆ. ಶ್ರೇಯಸ್ಯ ಅಯ್ಯರ್ ಗಾಯದ ತೀವ್ರತೆಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಬೆನ್ನಿನ ನೋವಿನಿಂದಾಗಿ ಶ್ರೇಯಸ್ ಅಯ್ಯರ್ ಕೂಡ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿದ್ದರು. ಬೆಂಗಳೂರಿನ ಎನ್ ಸಿಎಯಲ್ಲಿ ಆಯೋಜಿಸಿದ್ದ ಪುನರ್ವಸತಿ ಶಿಬಿರದಲ್ಲಿ ಭಾಗವಹಿಸಿ ಫಿಟ್ ನೆಸ್ ಪಡೆದು ಮತ್ತೆ ತಂಡಕ್ಕೆ ಸೇರ್ಪಡೆಗೊಂಡರು.

    MORE
    GALLERIES

  • 88

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ KKR ತಂಡಕ್ಕೆ ಬಿಗ್​ ಶಾಕ್​! ಟೂರ್ನಿಯಿಂದ ಸ್ಟಾರ್​​ ಪ್ಲೇಯರ್​ ಔಟ್​?

    ಆದರೆ ಮೂರು ವಾರಗಳಲ್ಲಿ, ಶ್ರೇಯಸ್ ಅಯ್ಯರ್ ಮತ್ತೆ ಅದೇ ಗಾಯವನ್ನು ಅನುಭವಿಸಿದರು. ಇದು ಈಗ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಆತಂಕ ತಂದಿದೆ. ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕನೊಬ್ಬ ಈ ರೀತಿ ಗಾಯಗೊಂಡಿರುವುದು ಯಾವುದೇ ಫ್ರಾಂಚೈಸಿಗೆ ನುಂಗಲಾರದ ತುತ್ತಾಗಿದೆ. ಭುಜದ ಗಾಯದಿಂದಾಗಿ ಶ್ರೇಯಸ್ ಅಯ್ಯರ್ 2021 ರ ಋತುವಿನ ಆರಂಭವನ್ನು ಕಳೆದುಕೊಂಡಿದ್ದರು.

    MORE
    GALLERIES