IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

IPL 2023: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೇ 6 ರಂದು ಆಡಲಿದೆ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

First published:

 • 18

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೇ 6 ರಂದು ಆಡಲಿದೆ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.ಈ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​ ಒಬ್ಬರು ಕಣಕ್ಕಿಳಿಯುತ್ತಿದ್ದಾರೆ.

  MORE
  GALLERIES

 • 28

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ಹೌದು, ಇಂಗ್ಲೆಂಡ್ ಆಲ್‌ರೌಂಡರ್ ಡೇವಿಡ್ ವಿಲ್ಲಿ ಈ ಋತುವಿನಲ್ಲಿ RCB ಪರ ನಾಲ್ಕು ಪಂದ್ಯಗಳನ್ನು ಆಡಿದ್ದರು ಮತ್ತು ಗಾಯದ ಕಾರಣದಿಂದ ಹೊರಗುಳಿಯುತ್ತಿದ್ದಾರೆ. ಈ ವಿಚಾರವನ್ನು ಅಧಿಕೃತವಾಗಿ ಆರ್​ಸಿಬಿ ಪ್ರಾಂಚೈಸಿಯೇ ತಿಳಿಸಿದೆ.

  MORE
  GALLERIES

 • 38

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2023 ರ ಉಳಿದ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಬದಲಿಗೆ ಕೇದಾರ್ ಜಾಧವ್ ಅವರನ್ನು ಆಯ್ಕೆ ಮಾಡಿದೆ. ಜಾದವ್​ ಇದಕ್ಕೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದರು.

  MORE
  GALLERIES

 • 48

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ಆರ್​ಸಿಬಿ ತಂಡ ಲಕ್ನೋ ವಿರುದ್ಧ ಕಣಕ್ಕಿಳಿದಾಗ ಕೇದಾರ್ ಜಾಧವ್​ ತಂಡವನ್ನು ಸೇರಿಕೊಂಡಿದ್ದರೂ ಸಹ ಪ್ಲೇಯಿಂಗ್​ 11ನಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಮೇ 6ರಂದು ನಡೆಯಲಿರುವ ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಇದು ತಂಡಕ್ಕೆ ಆನೆಬಲ ಬಂದಂತಾಗಿದೆ.

  MORE
  GALLERIES

 • 58

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  38 ವರ್ಷದ ಕೇದಾರ್ ಜಾಧವ್ ಇದೀಗ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದು, ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ವಿಶ್ರಾಂತಿಯಿಂದ ಬಂದಿದ್ದು, ಕ್ರಿಕೆಟ್​ ಆಡುವುದು ನನ್ನ ಫ್ಯಾಶನ್​ ಎಂದು ಹೇಳಿಕೊಂಡಿದ್ದಾರೆ.

  MORE
  GALLERIES

 • 68

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ಕೇದಾರ್ ಜಾಧವ್ 2010 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಒಟ್ಟು 93 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದುವರೆಗೆ 1196 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್ ಆಗಿ, ಜಾಧವ್ ಈ ಹಿಂದೆ RCB ಪರ 17 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

  MORE
  GALLERIES

 • 78

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ಜಾಧವ್ ಆರ್​ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಹೆಚ್ಚು ಬಲ ತುಂಬಲಿದ್ದಾರೆ. ಸದ್ಯ ಆರ್​ಸಿಬಿ ತಂಡದಲ್ಲಿ ಕೊಹ್ಲಿ, ಮ್ಯಾಕ್ಸ್​ವೆಲ್​ ಮತ್ತು ಡು ಪ್ಲೇಸಿಸ್​ ಬಿಟ್ಟರೆ ಯಾರೂ ಸಹ ಉತ್ತಮ ಬ್ಯಾಟಿಂಗ್​ ಮಾಡುತ್ತಿಲ್ಲ.

  MORE
  GALLERIES

 • 88

  IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್​ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ

  ಜಾಧವ್ ಸೇರ್ಪಡೆಯಿಂದ ಆರ್‌ಸಿಬಿ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಚ್ಚಿನ ಆಯ್ಕೆಗಳಿದ್ದು, ಮುಂಬರುವ ಪಂದ್ಯಗಳಲ್ಲಿ ಇದು ಸಹಕಾರಿಯಾಗಲಿದೆ. ಈ ಋತುವಿನಲ್ಲಿ ಅವರ ಅಗ್ರ ಮೂವರ ಹೊರತಾಗಿ ತಂಡದ ಬ್ಯಾಟಿಂಗ್ ಕ್ರಮಾಂಕವು ಇಲ್ಲಿಯವರೆಗೆ ಹೆಣಗಾಡುತ್ತಿದೆ ಮತ್ತು ಜಾಧವ್ ಅವರ ಸೇರ್ಪಡೆಯು ತಂಡಕ್ಕೆ ದೊಡ್ಡ ಸಹಾಯಕಾರಿಯಾಗಿದೆ.

  MORE
  GALLERIES