IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

RCB 2023: ಫಾಫ್ ಡು ಪ್ಲೆಸಿಸ್ 39 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 72 ರನ್ ಗಳಿಸಿದರು. ಈ ವೇಳೆ ಇಂದಿನ ಪಂದ್ಯ ಗೆಲ್ಲಲು ದೈವ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

First published:

  • 17

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ರಾಯಲ್​ ಚಾಲೆಂಜರ್ಸ್​ ಮತ್ತು ರಾಜಸ್ಥಾನ ನಡುವಿನ ಪಂದ್ಯವು ಅಭಿಮಾನಿಗಳಿಗೆ ಸಖತ್​ ಥ್ರಿಲ್​ ನೀಡಿತು. ಆರ್​ಸಿಬಿ ನೀಡಿದ 190 ರನ್ ಟಾರ್ಗೆಟ್​ ಬೆನ್ನಟ್ಟಿದ ರಾಜಸ್ಥಾನ್​ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸುವ ಮೂಲಕ 7 ರನ್​ಗಳ ಸೋಲನ್ನಪ್ಪಿತು.

    MORE
    GALLERIES

  • 27

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ಫಾಫ್ ಡು ಪ್ಲೆಸಿಸ್ 39 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 72 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ ಬ್ಯಾಟ್‌ನಿಂದ 4 ಸಿಕ್ಸರ್ ಮತ್ತು 6 ಬೌಂಡರಿಗಳು ಹೊರಬಂದವು.

    MORE
    GALLERIES

  • 37

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ಆದರೆ, ಆರ್​ಸಿಬಿ ರಾಜಸ್ಥಾನ್​ ವಿರುದ್ಧ ಗೆಲ್ಲಲು ಪ್ರಮುಖ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೌದು, ಆರ್​ಸಿಬಿ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡಲಾಯಿತು.

    MORE
    GALLERIES

  • 47

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಮತ್ತು ರಾಜಸ್ಥಾನ್​ ಪಂದ್ಯದ ವೇಳೆ ನಟ ಶಿವರಾಜ್‌ ಕುಮಾರ್‌ ಅಭಿನಯದ ಟಗರು ಚಿತ್ರದ ಟೈಟಲ್​ ಟ್ರ್ಯಾಕ್​ ಆದಂತಹ ಟಗರು ಬಂತು ಟಗರು ಹಾಡನ್ನು ಮತ್ತು ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಪ್ರಸಾರ ಮಾಡಲಾಯಿತು.

    MORE
    GALLERIES

  • 57

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ಆದರೆ, ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಪ್ರಸಾರವಾಗುತ್ತಿದ್ದಂತೆ ರಾಜಸ್ಥಾನ್​ ಪರ ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್‌ ಔಟ್​ ಆದರು. ಬಳಿಕ ಪಂದ್ಯದ ಗತಿಯೇ ಬದಲಾಯಿತು. ಅಲ್ಲಿಂದ ನಿಧಾನವಾಗಿ ಪಂದ್ಯ ಆರ್​ಸಿಬಿ ಕೈ ಸೇರಿತು.

    MORE
    GALLERIES

  • 67

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ಆದರೆ, ಪಂದ್ಯದ ಬಳಿಕ ಅಭಿಮಾನಿಗಳು ವರಾಹ ರೂಪಂ ಹಾಡು ಪ್ರಸರಾ ಆಗುತ್ತಿದ್ದಂತೆ ವಿಕೆಟ್​ ಬಿದ್ದ ಕಾರಣ ಆರ್​ಸಿಬಿ ಗೆಲುವಿನಲ್ಲಿ ದೈವದ ಆಶಿರ್ವಾದವಿದೆ. ಆರ್​ಸಿಬಿ ತಂಡಕ್ಕೆ ದೈವದ ಕೃಪೆ ಇದೆ ಎಂದೆಲ್ಲಾ ಸಾಮಾಜಿಕ ಜಾಲತಾನದಲ್ಲಿ ಹೇಳುತ್ತಿದ್ದಾರೆ.

    MORE
    GALLERIES

  • 77

    IPL 2023: ಆರ್​ಸಿಬಿ ಪಂದ್ಯದ ವೇಳೆ ಮೊಳಗಿದ ವರಾಹ ರೂಪಂ ಸಾಂಗ್​, ಮ್ಯಾಚ್​ ಗೆಲ್ಲೋಕೆ ದೈವ ಕಾರಣ ಅಂದ್ರು ಫ್ಯಾನ್ಸ್!

    ಇನ್ನು, ಆರ್​ಸಿಬಿ ತಂಡ ಈ ಗೆಲುವಿನೊಂದಿಗೆ ಐಪಿಎಲ್​ ಅಂಕಪಟ್ಟಿಯಲ್ಲಿ 4 ಗೆಲುವಿನೊಂದಿಗೆ 8 ಪಾಯಿಂಟ್​ ಗಳಿಸಿ 5ನೇ ಸ್ಥಾನದಲ್ಲಿದೆ. ರನ್​ರೇಟ್​ ಕಡಿಮೆ ಇರುವ ಕಾರಣ ಆರ್​ಸಿಬಿ ಗೆದ್ದರೂ ಅಂಕಪಟ್ಟಿಯಲ್ಲಿ ಏರಿಕೆ ಕಂಡಿಲ್ಲ.

    MORE
    GALLERIES