ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ನಿಧಾನಗತಿಯ ಓವರ್ ರೇಟ್‌ನಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ನಿಯಮದ ಪ್ರಕಾರ 12 ಲಕ್ಷ ದಂಡ ವಿಧಿಸಲಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡ ಗೆದ್ದರೂ ನಾಯಕ ಶಿಕ್ಷೆ ಎದುರಿಸಬೇಕಾಯಿತು. ಪಂದ್ಯದ ರೆಫರಿ ಅವರು KL ರಾಹುಲ್‌ಗೆ ಈ ದಂಡವನ್ನು ವಿಧಿಸಿದರು, ಅವರನ್ನು ನಿಧಾನಗತಿಯ ಓವರ್‌ರೇಟ್‌ಗೆ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.
ನಿಧಾನಗತಿಯ ಓವರ್ ರೇಟ್ ನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೂ ದಂಡ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಮಯಕ್ಕೆ ಓವರ್ ಮುಗಿಸಲು ಸಾಧ್ಯವಾಗದ ಕಾರಣ ಸಂಜು ಸ್ಯಾಮ್ಸನ್ ದಂಡವನ್ನು ತೆತ್ತಿದ್ದಾರೆ. ಇದಕ್ಕಾಗಿ ಪಂದ್ಯದ ಶುಲ್ಕದಲ್ಲಿ 12 ಲಕ್ಷ ರೂ.ಗಳನ್ನು ಕಡಿತಗೊಳಿಸಲಾಗಿತ್ತು.