ಕಳೆದ ಋತುವಿನಲ್ಲಿ ಉತ್ತಮ ರನ್ ಗಳಿಸಿದ ಗುಜರಾತ್ ಟೈಟಾನ್ಸ್ ಅನುಭವಿ ಡೇವಿಡ್ ಮಿಲ್ಲರ್ ಈಗಾಗಲೇ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಈ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಕಳೆದ ಋತುವಿನಲ್ಲಿ ಗುಜರಾತ್ ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ್ದರು. ಒಂದು ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 94 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡಕ್ಕೆ ಚೆನ್ನೈ ವಿರುದ್ಧ ಭರ್ಜರಿ ಜಯ ತಂದುಕೊಟ್ಟಿದ್ದರು.
ಗುಜರಾತ್ ಟೈಟಾನ್ಸ್ ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಿದ ಡೇವಿಡ್ ಮಿಲ್ಲರ್ ಕಳೆದ ಋತುವಿನಲ್ಲಿ 16 ಪಂದ್ಯಗಳಲ್ಲಿ ಒಟ್ಟು 481 ರನ್ ಗಳಿಸಿದ್ದರು. ಇದೇ ವೇಳೆ ಚೆನ್ನೈ ವಿರುದ್ಧ 94 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಅತ್ಯುತ್ತಮವಾಗಿತ್ತು. ಕಳೆದ ಋತುವಿನಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದ ಡೇವಿಡ್ ಮಿಲ್ಲರ್ 23 ಸಿಕ್ಸರ್ ಮತ್ತು 32 ಬೌಂಡರಿಗಳನ್ನು ಬಾರಿಸಿದರು.