IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

ಆರ್​ಸಿಬಿ ಬ್ಯಾಟಿಂಗ್ ಅರ್ಡರ್​ನಲ್ಲಿ ಈ ಮೂವರ ಬಳಿಕ ಉತ್ತಮ ಬ್ಯಾಟರ್​​ ಕೊರತೆ ಕಾಡುತ್ತಿದೆ. ಇತ್ತ ಬೌಲಿಂಗ್​ನಲ್ಲೂ ಆರ್​ಸಿಬಿ ಪಡೆ ನಿಶ್ಚಿತ ಪ್ರದರ್ಶನ ನೀಡುತ್ತಿಲ್ಲ.

First published:

  • 18

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇದುವರೆಗೂ ಐಪಿಎಲ್​ ಟ್ರೋಪಿಯನ್ನು ಸ್ವತಃ ಮಾಡಿಕೊಂಡಿಲ್ಲ. 2009, 2016ರ ಆವೃತ್ತಿಯಲ್ಲಿ ಫೈನಲ್​ ಪ್ರವೇಶ ಮಾಡಿದ್ದರೂ ಕೊನೆಯ ಹಂತದಲ್ಲಿ ಕೈ ಜಾರಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ವಿರಾಟ್​ ಕೊಹ್ಲಿ, ಎಬಿ ಡೀ ವಿಲಿಯರ್ಸ್​, ಕ್ರಿಸ್​ ಗೇಲ್​​, ಪೀಟರ್ಸನ್ ರಂತಹ ದೈತ್ಯ ಆಟಗಾರರು ತಂಡದ ಪರ ಆಡಿದರೂ ಕಪ್​ ಮಾತ್ರ ಗೆಲ್ಲಲಿಲ್ಲ. ಕಳೆದ ಆವೃತ್ತಿಯಲ್ಲಿ ಕೂಡ ಪ್ಲೇ ಆಫ್ಸ್​ ವರೆಗೂ ಸೇರಿದರೂ ಕ್ವಾಲಿಫೈಯರ್​ 2ನೇ ಪಂದ್ಯದಲ್ಲಿ ಸೋತು ಮೂರನೇ ಸ್ಥಾನಕ್ಕೆ ತೃಪ್ತಿಯಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ಈ ಆವೃತ್ತಿಯಲ್ಲಿ ಕೂಡ ಕಪ್​ ಗೆಲ್ಲುವ ಫೆವರೇಟ್ ತಂಡವಾಗಿ ಕಣಕ್ಕೆ ಇಳಿದರೂ ಎದ್ದು ಬಿದ್ದು ಪ್ರಯಾಣವನ್ನು ಮುಂದುವರಿಸುತ್ತಿದೆ. ಸದ್ಯದ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಕೊಹ್ಲಿ, ಮ್ಯಾಕ್ಸ್​ವೆಲ್​​, ಫಾಫ್​ ಡುಫ್ಲೆಸಿಸ್​ ಅವರನ್ನೇ ನೆಚ್ಚಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ಆರ್​ಸಿಬಿ ಬ್ಯಾಟಿಂಗ್ ಅರ್ಡರ್​ನಲ್ಲಿ ಈ ಮೂವರ ಬಳಿಕ ಉತ್ತಮ ಬ್ಯಾಟರ್​​ ಕೊರತೆ ಕಾಡುತ್ತಿದೆ. ಇತ್ತ ಬೌಲಿಂಗ್​ನಲ್ಲೂ ಆರ್​ಸಿಬಿ ಪಡೆ ನಿಶ್ಚಿತ ಪ್ರದರ್ಶನ ನೀಡುತ್ತಿಲ್ಲ. ಆದರೂ ಪ್ರಮುಖ ಪಂದ್ಯಗಳಲ್ಲಿ ಗೆಲುವು ಪಡೆದು ಪ್ಲೇ ಆಫ್​ ರೇಸ್​ನಲ್ಲಿ ಬಂದು ನಿಂತಿದ್ದು, ಅದಕ್ಕೆ ಕಾರಣವಾಗಿದ್ದು ಗ್ಲೇನ್​​ ಮ್ಯಾಕ್ಸ್​ವೆಲ್​. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ಕೊಹ್ಲಿ ಹಾಗೂ ಡು ಫ್ಲೆಸಿಸ್​ ರನ್​ ಗಳಿಸುತ್ತಿದ್ದರೂ ಅವರು ನಿಧಾನವಾಗಿ ಬ್ಯಾಸ್ ಬೀಸುತ್ತಿದ್ದಾರೆ. ಮ್ಯಾಕ್ಸ್​ವೆಲ್​​ ಬ್ಯಾಟ್​ನಿಂದ ಬರುವಂತೆ ಸ್ಫೋಟಕ ಬ್ಯಾಟಿಂಗ್​ ಆಡುತ್ತಿಲ್ಲ. ಕೊಹ್ಲಿ ಕೇವಲ 133ರ ಸ್ಟ್ರೈಕ್​ ರೇಟ್​ನೊಂದಿಗೆ ರನ್ ಗಳಿಸಿತ್ತು, ಡು ಫ್ಲೆಸಿಸ್​​ ಸ್ಟ್ರೈಕ್​ ರೇಟ್​ ಕೂಡ ಕೊಹ್ಲಿಗಿಂತ ಕಡಿಮೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ಮ್ಯಾಕ್ಸ್​​ವೆಲ್ ವಿಚಾರಕ್ಕೆ ಬಂದರೆ 182.86 ಸ್ಟ್ರೇಕ್​ ರೇಟ್​​ ನೊಂದಿಗೆ ರನ್​ ಗಳಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 384 ರನ್​ ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳು ಸೇರಿದೆ. ಅಲ್ಲದೆ, 30 ಸಿಕ್ಸರ್​ಗಳು ಕೂಡ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ಸ್ಪಿನ್​​ ಸೇರಿದಂತೆ ವೇಗದ ಬೌಲಿಂಗ್​​ ಯಾವುದೇ ಇದ್ದರೂ ಮ್ಯಾಕ್ಸ್​ವೆಲ್​ ಕ್ರೀಸ್​​ನಲ್ಲಿದ್ದರೆ ರನ್​​ಗಳ ಹೊಳೆ ಹರಿಯಲೇಬೇಕು ಎಂಬಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ಅವರ ಫೆವರೇಟ್​​ ಸ್ವಿಚ್​ ಹಿಟ್​, ಸ್ಕೂಪ್ ಶಾಟ್​, ಫೋರ್​ ಹ್ಯಾಂಡ್ ಶಾಟ್​​, ರಿವರ್ಸ್​ ಸ್ವೀಪ್​​ ಗಳೊಂದಿಗೆ ರನ್ ಗಳಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    IPL 2023: ಕೊಹ್ಲಿ ಅಲ್ಲ, ಈತನೇ ಈ ವರ್ಷದ RCB ಕೀ ಪ್ಲೇಯರ್​​; 10 ಓವರ್‌ ಕ್ರೀಸ್‌ನಲ್ಲಿದ್ರೆ ಸಾಕು ಪ್ಲೇ ಆಫ್​ ಫಿಕ್ಸ್!

    ಮ್ಯಾಕ್ಸ್​ವೆಲ್​ ಕೇವಲ 10 ಓವರ್ ಕ್ರಿಸ್​ನಲ್ಲಿದ್ದರೆ ವಿಧ್ವಂಸ ಸೃಷ್ಟಿ ಮಾಡುವುದು ಖಚಿತ. ಆರ್​ಸಿಬಿ ವಿರುದ್ಧ ಮ್ಯಾಚ್ ಎಂದರೆ ಎದುರಾಳಿ ಆಟಗಾರರ ಕ್ಯಾಪ್ಟನ್​ ಮೊದಲು ಮ್ಯಾಕ್​​​​ವೆಲ್​ ಅವರನ್ನೇ ಟಾರ್ಗೆಟ್​ ಮಾಡಿ ತಂತ್ರ ರಚಿಸುತ್ತಾರೆ. 2023ರ ಆವೃತ್ತಿಯಲ್ಲಿ ಇನ್ನುಳಿದ ಮೂರು ಪಂದ್ಯಗಳಲ್ಲಿ ಮ್ಯಾಕ್ಸ್​​ವೆಲ್​​ ಇದೇ ರೀತಿ ಆಡಿದರೆ ಆರ್​ಸಿಬಿ ಫ್ಲೇ ಆಫ್​ ಪ್ರವೇಶ ಮಾಡುವುದು ಖಚಿತ ಅಂತ ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES