RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

RCB vs CSK Fans War: ಇಂದು ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯ ನಡೆಯಲಿದ್ದು, ಮ್ಯಾಚ್​ಗೂ ಮುನ್ನ ಎರಡೂ ತಂಡಗಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಯುದ್ದವನ್ನೇ ಆರಂಭಿಸಿದ್ದಾರೆ. ಭಾರತ ಮತ್ತು ಪಾಕ್​ ಪಂದ್ಯದಂತೇ ಹೈವೋಲ್ಟೇಜ್​ ಪಂದ್ಯ ಇದಾಗಿದೆ.

First published:

  • 18

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಪ್ರತಿ ವರ್ಷ ಐಪಿಎಲ್ ಶುರುವಾದ ಕೂಡಲೇ ಆರ್​ಸಿಬಿ ಮತ್ತು ಸಿಎಸ್​ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಎಬ್ಬಿಸುವುದು ಸಹಜವಾಗಿದೆ. ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಿ ಫೋಸ್ಟ್​ಗಳು ಹರಿದಾಡುತ್ತಿವೆ. ವಿಶೇಷವಾಗಿ ಚೆನ್ನೈ ಮತ್ತು ಬೆಂಗಳೂರು ಅಭಿಮಾನಿಗಳು ಯಾವಾಗಲೂ ಸೋಶಿಯಲ್​ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳನ್ನು ಮಾಡುತ್ತಿರುತ್ತಾರೆ.

    MORE
    GALLERIES

  • 28

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಆದರೆ, ಮುಂಬೈ vs ಚೆನ್ನೈ ಪಂದ್ಯವನ್ನು ವಿಶ್ಲೇಷಕರು ಈ ಹೋರಾಟವನ್ನು ಕ್ಲಾಸಿಕೋ ಪಂದ್ಯ ಎಂದು ಹೇಳುತ್ತಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ vs ಪಾಕಿಸ್ತಾನ, ಆಸ್ಟ್ರೇಲಿಯಾ vs ಇಂಗ್ಲೆಂಡ್ ಮತ್ತು ಫುಟ್‌ಬಾಲ್‌ನಲ್ಲಿ ಅರ್ಜೆಂಟೀನಾ vs ಬ್ರೆಜಿಲ್ ಯಾವಾಗಲೂ ಕ್ರೇಜ್ ಹೆಚ್ಚಿರುತ್ತದೆ.

    MORE
    GALLERIES

  • 38

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಆರ್​ಸಿಬಿ vs ಚೆನ್ನೈ ಮ್ಯಾಚ್ ಕೂಡ ಅದೇ ರೇಂಜ್ ನಲ್ಲಿ ನಡೆಯುತ್ತಿದೆ. ನೀನಾ ನಾನಾ ಎಂಬಂತೆ ಪಂದ್ಯವು ಕೊನೆಯ ಬಾಲ್​ವರೆಗೂ ಪಂದ್ಯದ ರೋಚಕತೆ ಇರುತ್ತದೆ. ಈ ಪಂದ್ಯವು ಒಂದರ್ಥದಲ್ಲಿ ಐಪಿಎಲ್​ನಲ್ಲಿ ಪ್ರಾಮಚೈಸಿಗಳಿಗೆ ಚಿನ್ನದ ಮೊಟ್ಟೆ ಇಡುವ ಪಂದ್ಯವಾಗಿದೆ.

    MORE
    GALLERIES

  • 48

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    RCB ಅಭಿಮಾನಿಗಳು ತಮ್ಮ ತಂಡ ಇನ್ನೂ ಕಪ್​ ಗೆಲ್ಲದಿದ್ದರೂ ಸಹ ತಂಡಕ್ಕಾಗಿ ಇಂದಿಗೂ ಮೊದಲಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅದೇ ರೀತಿ ಧೋನಿ ಅಭಿಮಾನಿಗಳೂ ಸಹ ಚೆನ್ನೈ ತಂಡವನ್ನು ಅತ್ಯಂತ ಪ್ರೀತಿಯಿಂದ ತಮ್ಮ ತಂಡ ಎಂಬಂತೆ ಮೀಮ್ಸ್​ಗಳನ್ನು ಹರಿಬಿಡುತ್ತಿರುತ್ತಾರೆ. ನಿಜವಾಗಿ ಕೊಹ್ಲಿ ಮತ್ತು ಧೋನಿ ನಡುವೆ ಉತ್ತಮ ಸಂಬಂಧವಿದೆ.

    MORE
    GALLERIES

  • 58

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಆದರೆ, ಈ ಎರಡೂ ತಂಡಗಳ ಅಭಿಮಾನಿಗಳು ಪಂದ್ಯದ ಮೊದಲು ಮತ್ತು ನಂತರ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಪೋಸ್ಟ್ ಗಳು, ಟ್ವೀಟ್ ಗಳನ್ನು ಮಾಡಿ ಫ್ಯಾನ್ ವಾರ್ ಗಳನ್ನು ನಡೆಸುತ್ತಿರುತ್ತಾರೆ. ಇದೇ ಕಾರಣದಿಂದ ಇಂದು ಆರ್​ಸಿಬಿ vs ಚೆನ್ನೈ ನಡುವೆ ಮತ್ತೊಮ್ಮೆ ಪಂದ್ಯ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ಅಭಿಮಾನಿಗಳ ವಾರ್​ ಆರಂಭವಾಗಿದೆ.

    MORE
    GALLERIES

  • 68

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಇದುವರೆಗೆ ಎರಡು ತಂಡಗಳ ನಡುವೆ 30 ಪಂದ್ಯಗಳು ನಡೆದಿವೆ. ಅದರಲ್ಲಿ ಚೆನ್ನೈ 19 ಬಾರಿ ಗೆದ್ದಿದೆ. ಬೆಂಗಳೂರು 10 ಬಾರಿ ಗೆದ್ದಿದೆ. ಒಂದು ಪಂದ್ಯಕ್ಕೆ ಫಲಿತಾಂಶವಿಲ್ಲ. ಇದೇ ಕಾರಣಕ್ಕೆ ಉಭಯ ತಂಡಗಳ ಅಭಿಮಾನಿಗಳು ಧೋನಿ vs ಕೊಹ್ಲಿ ಎಂಬ ವಾರ್​ ಆರಂಭಿಸಿದ್ದಾರೆ.

    MORE
    GALLERIES

  • 78

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಈ ಅಂಕಿ ಅಂಶಗಳನ್ನು ನೋಡಿ ಚೆನ್ನೈ ಅಭಿಮಾನಿಗಳು ಆರ್​ಸಿಬಿ ವಿರುದ್ಧ ವಾರ್​ ಆರಂಭಿಸಿದ್ದಾರೆ. ಅದೇ ರೀತಿ ಆರ್​ಸಿಬಿ ಅಭಿಮಾನಿಗಳು ಚೆನ್ನೈ ತಂಡ 2 ವರ್ಷ ಬ್ಯಾನ್​ ಆಗಿರುವುದರ ಕುರಿತು ಕೌಂಟರ್​ ನೀಡುತ್ತಿದ್ದಾರೆ. ಈಗಾಗಲೇ ಆರ್​ಸಿಬಿ vs ಸಿಎಸ್​ಕೆ ಟ್ಯಾಗ್​ ಟ್ರೆಂಡ್​ ಆಗಿದೆ.

    MORE
    GALLERIES

  • 88

    RCB vs CSK Rivalry: ಮತ್ತೆ ಶುರುವಾಯ್ತು ಆರ್​​ಸಿಬಿ-ಸಿಎಸ್​ಕೆ ಫ್ಯಾನ್ಸ್​ ವಾರ್​​, ಪ್ರತಿ ಬಾರಿ ಹೀಗಾಗೋದ್ಯಾಕೆ?

    ಇವತ್ತಿನ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಧೋನಿ RCB ವಿರುದ್ಧ 140 ಸ್ಟ್ರೈಕ್ ರೇಟ್‌ನೊಂದಿಗೆ 605 ಎಸೆತಗಳಲ್ಲಿ 849 ರನ್ ಗಳಿಸಿದ್ದು, ಕೊಹ್ಲಿ ಸಹ ಚೆನ್ನೈ ವಿರುದ್ಧ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ.

    MORE
    GALLERIES