IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

IPL 2023: ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸೋಲನ್ನು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಫಾಫ್ ಡು ಪ್ಲೆಸಿಸ್ ತಂಡವನ್ನು 8 ರನ್‌ಗಳಿಂದ ಸೋಲಿಸಿತು. ಇದರ ನಡುವೆ ಆರ್​ಸಿಬಿ ಅಭಿಮಾನಿಗಳು ಕೋಪಗೊಂಡಿದ್ದಾರೆ.

First published:

  • 18

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಐಪಿಎಲ್ 2023ರಲ್ಲಿ ಆರ್‌ಸಿಬಿ ಮೂರನೇ ಸೋಲನ್ನು ಅನುಭವಿಸಿದೆ, ಸೋಮವಾರದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫಾಫ್ ಡು ಪ್ಲೆಸಿಸ್ ತಂಡವನ್ನು 8 ರನ್‌ಗಳಿಂದ ಸೋಲಿಸಿತು. ಪ್ರಸಕ್ತ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ 5 ಪಂದ್ಯಗಳಲ್ಲಿ ಇದು 3ನೇ ಸೋಲು ಕಂಡಿದೆ.

    MORE
    GALLERIES

  • 28

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಒಟ್ಟಿಗೆ 'ಕ್ಲಿಕ್' ಮಾಡಲು ಸಾಧ್ಯವಾಗುತ್ತಿಲ್ಲ. ಆರ್​ಸಿಬಿ ತಮ್ಮ ಮುಂದಿನ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಸೆಣಸಾಡಲಿದೆ.

    MORE
    GALLERIES

  • 38

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಮತ್ತೊಂದೆಡೆ, ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ ಅವರಂತಹ ಸ್ಟಾರ್ ಆಟಗಾರರು ಇದ್ದರೂ ಒಂದರ ಹಿಂದೆ ಒಂದರಂತೆ ತಂಡ ಸೋಲುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    MORE
    GALLERIES

  • 48

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಸಿಎಸ್‌ಕೆಯಿಂದ ಸೋಲಿನ ನಂತರ ಆರ್‌ಸಿಬಿ ಪ್ರಾಂಚೈಸಿ ಒಂದು ಟ್ವೀಟ್ ಮಾಡಿದೆ. ಆದರೆ ಈ ಟ್ವೀಟ್​ ಅಭಿಮಾನಿಗಳ ಈ ಕೋಪಕ್ಕೆ ಕಾರಣವಾಗಿದೆ. ಆರ್​ಸಿಬಿ ಟ್ವೀಟ್​ನಲ್ಲಿ, ‘ಸ್ಪಿರಿಟ್ ಆಫ್ ದಿ ಗೇಮ್... ಕೊನೆಯಲ್ಲಿ, ಆಟವು ಯಾವಾಗಲೂ ಗೆಲ್ಲುತ್ತದೆ‘ ಎಂದು ಬರೆದು ಪೋಸ್ಟ್​ ಮಾಡಿದೆ.

    MORE
    GALLERIES

  • 58

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಭೇಟಿಯಾಗಿ ಮಾತನಾಡುತ್ತಿರುವ ಫೋಟೋಗಳನ್ನು ಸಹ ಪೋಸ್ಟ್ ಮಾಡಲಾಗಿದೆ. ಸಹಜವಾಗಿಯೇ ಈ ಟ್ವೀಟ್ ಅನ್ನು ಉತ್ತಮ ಉದ್ದೇಶದಿಂದ ಮಾಡಲಾಗಿದೆ. ಆದರೆ ಅಭಿಮಾನಿಗಳು RCB ವಿರುದ್ಧ ಕೋಪದಿಂದ ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 68

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    RCB ಯ ಟ್ವೀಟ್‌ಗೆ ಕೋಪಗೊಂಡ ಅಭಿಮಾನಿಯೊಬ್ಬರು, ಹೌದು, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್. ಆಟ ಯಾವಾಗಲೂ ಗೆಲ್ಲುತ್ತದೆ, ಆರ್‌ಸಿಬಿ ಯಾವಾಗ ಗೆಲ್ಲುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ನಾವೂ ಗೆಲ್ಲಲು ಸಾಧ್ಯವೇ? ಆಕ್ರಮಣಕಾರಿ ಶೈಲಿಯು ನಿಮ್ಮನ್ನು ಸ್ವಲ್ಪ ದೂರ ಕೊಂಡೊಯ್ಯಬಹುದು ಆದರೆ ಗೆಲುವಿಗೆ ತಂತ್ರ, ನಾವೀನ್ಯತೆ ಮತ್ತು ಕ್ರಿಯಾ ಯೋಜನೆ ಅಗತ್ಯವಿದೆ ಎಂದು ಬರೆದಿದ್ದಾರೆ.

    MORE
    GALLERIES

  • 78

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಇದರ ನಡುವೆ ಆಡುವ XI ನಲ್ಲಿ ಶಹಬಾಜ್ ಅಹ್ಮದ್ ಮತ್ತು ಹರ್ಷಲ್ ಪಟೇಲ್ ಅವರ ಉಪಸ್ಥಿತಿಯನ್ನು ಸಹ ಪ್ರಶ್ನಿಸಲಾಗಿದೆ. ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ಆಟ ಯಾವಾಗಲೂ ಗೆಲ್ಲುತ್ತದೆ ಏಕೆಂದರೆ RCB ಎಂದಿಗೂ ಗೆಲ್ಲುವುದಿಲ್ಲ ಎಂದು ಬೇಸರಿಂದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 88

    IPL 2023: ಎಲ್ಲದಕ್ಕೂ ಒಂದು ಲಿಮಿಟ್​ ಇರುತ್ತೆ, RCB ವಿರುದ್ಧ ಫ್ಯಾನ್ಸ್ ಗರಂ!

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಐಪಿಎಲ್ ಕೋಡ್ ಆರ್ಟಿಕಲ್ 2.2 ರ ಹಂತ 1 ಅನ್ನು ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದ್ದಾರೆ. ವಿರಾಟ್​ ಕೊಹ್ಲಿ ಪಂದ್ಯ ಶುಲ್ಕವನ್ನು ಶೇಕಡಾ 10 ರಷ್ಟು ಕಡಿತಗೊಳಿಸಿದೆ.

    MORE
    GALLERIES