IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

IPL 2023: ಪ್ರತಿ ಸಲ ಬಿಡ್ಡಿಂಗ್ ನಲ್ಲಿ ಭಾಗವಹಿಸೋ ಆರ್​ಸಿಬಿ ಅಭಿನವ್ ಮನೋಹರ್, ಗೌತಮ್, ದೇವದತ್​ ಪಡಿಕಲ್, ಮನೀಶ್ ಪಾಂಡೆ ತರದ ಲೋಕಲ್ ಪ್ಲೇಯರ್ ಗಳ ಮೇಲೆ ಒಲವನ್ನೇ ತೋರಿಸುತ್ತಿಲ್ಲ.

First published:

  • 18

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಆರ್​ಸಿಬಿ ತಂಡ ಐಪಿಎಲ್​ನಲ್ಲಿ ಅತಿ ಹೆಚ್ಚು ಫ್ಯಾನ್ ಬೇಸ್ ಇರುವ ತಂಡವಾಗಿದೆ. ಈ ಸಲ ಕಪ್ ನಮ್ದೇ ಅಂತ ಎಂದು ಅಭಿಮಾನಿಗಳು ಸತತ 15 ಆವೃತಿಯಿಂದ ಕಾಯುತ್ತಿದ್ದಾರೆ. ಆದರೆ ಈ ಬಾರಿ ಆರ್​ಸಿಬಿ ಪ್ರದರ್ಶನ ನೋಡುತ್ತಿದ್ದರೆ ಮುಂದಿನ ಸಲ ಕಪ್ ನಮ್ದೇ ಅಂತ ಹೇಳೋ ರೀತಿ ಆಗಿದೆ. ಸದ್ಯಕ್ಕೆ ಕಪ್ ಗೆದ್ರೆ ಅದು ಜಗತ್ತಿನ ಅಚ್ಚರಿಯೇ ಸರಿ ಎನ್ನುವಂತಾಗಿದೆ.

    MORE
    GALLERIES

  • 28

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಈಗಾಗಲೇ 8 ಪಂದ್ಯಗಳನ್ನ ಆರ್​ಸಿಬಿ ಆಡಿದೆ. ಅದರಲ್ಲಿ ನಾಲ್ಕರಲ್ಲಿ ಸೋತಿದೆ. ನಾಲ್ಕರಲ್ಲಿ ಗೆದ್ದಿದೆ. ಆಟದಲ್ಲಿ ಸೋಲು ಗೆಲುವು ಸಹಜ. ಆದ್ರೆ ಆರ್​ಸಿಬಿ ಸೋಲೋ ರೀತಿ, ಮೈದಾನದಲ್ಲಿ ಇಡೀ ತಂಡದ ಇಂಟೆಂಟ್ ನೋಡ್ತಿದ್ರೆ ಅಂತರಾಷ್ಟ್ರೀಯ ಕ್ವಾಲಿಟಿ ಇರೋ ಟೀಂ ಇದಾ ಎಂಬ ಅನುಮಾನ ಹುಟ್ಟಿದೆ.

    MORE
    GALLERIES

  • 38

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಇದರ ನಡುವೆ ಆರ್​ಸಿಬಿಗೆ KGF ಬಲ ಇದೆ. ಕೊಹ್ಲಿ, ಫಾಫ್, ಗ್ಲೆನ್ ಫಾರ್ಮ್ ಸದ್ಯ ಉತ್ತಮವಾಗಿದೆ. ಆದರೆ ಇವರನ್ನು ಬಿಟ್ಟು ಇನ್ಯಾವ ಬಲವೂ ತಂಡಕ್ಕಿಲ್ಲ. ಬೌಲಿಂಗ್​ನಲ್ಲಿ ಸಿರಾಜ್ ಮಾತ್ರ ಆಕ್ರಮಣಕಾರಿಯಾಗಿದ್ದಾರೆ. ಅದು ಬಿಟ್ರೆ ಮತ್ಯಾರು ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ.

    MORE
    GALLERIES

  • 48

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಯಾವುದೇ ತಂಡ ಇರಲಿ ಆಡುವ 11ರ ಬಳಗದ ಜೊತೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಒಬ್ರನ್ನ ಬಳಸಿಕೊಳ್ಳೋ ಆಪ್ಷನ್ ಇರುತ್ತೆ. ಆದ್ರೆ ಆರ್​ಸಿಬಿನಲ್ಲಿ ಇಂಪ್ಯಾಕ್ಟ್ ಪ್ಲೇಯರ್ಸ್ ಇರಲಿ, ಆಡುವ 11 ಬಳಗವೇ ಸರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಆರ್​ಸಿಬಿ ತಂಡದಲ್ಲಿ 4 ಜನರನ್ನು ಹೊರತುಪಡಿಸಿ ಉತ್ತಮವಾಗಿ ಆಡೋರಿಲ್ಲ.

    MORE
    GALLERIES

  • 58

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಆರ್​ಸಿಬಿಯ ಮೊದಲ ವಿಕೆಟ್ ಬಿತ್ತು ಅಂದ್ರೆ ಮೂರನೇ ಕ್ರಮಾಂಕದಲ್ಲಿಆಡೋಕೆ ಶಬನಾಜ್ ಆಹ್ಮದ್ ಬರುತ್ತಿದ್ದಾರೆ. ಆದರೆ, ಶಬನಾಜ್ ಆಹ್ಮದ್ ಈವರೆಗೂ ಉತ್ತಮ ಪ್ರದರ್ಶನ ನೀಡಿಲ್ಲ. ಇವರು ಮಾತ್ರವಲ್ಲದೇ ಶಬನಾಜ್ ಔಟ್ ಆದ ತಕ್ಷಣ, ಅನೂಜ್ ರಾವತ್, ಮಹಿಪಾಲ್ ಲಮ್ರೋರ, ಪ್ರಭು ದೇಸಾಯಿ ಮತ್ತು ದಿನೇಶ್ ಕಾರ್ತಿಕ್ ಸಹ ಯಾರೊಬ್ಬರೂ ಬ್ಯಾಟಿಂಗ್​ನಲ್ಲಿ ಸರಿಯಾದ ಹಿಡಿತ ಹೊಂದಿಲ್ಲ.

    MORE
    GALLERIES

  • 68

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಆದರೆ, ಖಲಪೆ ಫಾರ್ಮ್​ನಲ್ಲಿರುವ ಆಟಗಾರರನ್ನು ಬಿಟ್ಟು ಬೇರೆಯವರನ್ನಾದ್ರು ಆಡಿಸೋಣ ಎಂದರೆ, ಬ್ಯಾಕಪ್ ಪ್ಲೇಯರ್ಸೇ ಇಲ್ಲ. ತಂಡದಲ್ಲಿ ಕರಣ್ ಶರ್ಮಾ, ಹಿಮಾಂಶು ಶರ್ಮಾ, ಸೋನು ಯಾದವ್, ಅವಿನಾಶ್ ಸಿಂಗ್, ರಜನ್ ಕುಮಾರ್ ಹೀಗೆ ಯಾರು ಸಹ ಪವರ್ ಹಿಟ್ಟರ್ಸ್ ಇಲ್ಲ. ಜೊತೆಗೆ ಸರಿಯಾದ ಬ್ಯಾಕಪ್​ ವಿಕೆಟ್​ ಕೀಪರ್​ ಸಹ ಇಲ್ಲ.

    MORE
    GALLERIES

  • 78

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಪ್ರತಿ ಸಲ ಬಿಡ್ಡಿಂಗ್ ನಲ್ಲಿ ಭಾಗವಹಿಸೋ ಆರ್​ಸಿಬಿ ಅಭಿನವ್ ಮನೋಹರ್, ಗೌತಮ್, ದೇವದತ್​ ಪಡಿಕಲ್, ಮನೀಶ್ ಪಾಂಡೆ ತರದ ಲೋಕಲ್ ಪ್ಲೇಯರ್ ಗಳ ಮೇಲೆ ಒಲವನ್ನೇ ತೋರಿಸುತ್ತಿಲ್ಲ. ಹೀಗಾಗಿ ಮೂರು ಮತ್ತೊಬ್ಬರು ಪ್ಲೇಯರ್ ಬಿಟ್ರೆ ಯಾರ ಮೇಲೂ ನಂಬಿಕೆ ಇಡದ ಪರಿಸ್ಥಿತಿಗೆ ಆರ್​ಸಿಬಿ ಬಂದು ತಲುಪಿದೆ.

    MORE
    GALLERIES

  • 88

    IPL 2023: ಬ್ಯಾಕಪ್​​ ಇರಲಿ, ಇವರನ್ನ ಬಿಟ್ರೆ ಬೇರೆ ದಾರಿಯೇ ಇಲ್ಲ! ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಫ್ಯಾನ್ಸ್​​ ಗರಂ!

    ಮುಂದಿನ ಪಂದ್ಯದಲ್ಲಾದರೂ ಆರ್​ಸಿಬಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ಇಲ್ಲವೆಂದ್ರೆ ಗೆಲ್ಲುವುದು ಕಷ್ಟವಾಗಿರಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದು, ಈಗಾಗಲೇ ತಂಡದ ಪ್ಲೇಯಿಂಗ್​ 11 ಮೇಲೆ ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ವರದಿ: ಆನಂದ್​. ಎಂ, ನ್ಯೂಸ್​ 18 ಕನ್ನಡ)

    MORE
    GALLERIES