IPL 2023: ಕೆಕೆಆರ್ ನೀಡಿದ 205 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ ತಂಡವು ಕೇವಲ 17.4 ಓವರ್ಗಳಲ್ಲಿ ತನ್ನೆಲ್ಲಾ 10 ವಿಕೆಟ್ಗಳನ್ನು ಕಳೆದುಕೊಂಡು ಸೋಲನ್ನಪ್ಪಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘ ಗೆಲುವಿನೊಂದಿಗೆ ಋತುವನ್ನು ಆರಂಭಿಸಿತು. ಆದರೆ ಎರಡನೇ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಕೆಕೆಆರ್ ನ್ನು ಸೋಲಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಲಿಲ್ಲ.
2/ 8
ಕೆಕೆಆರ್‌ನ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣರಾದರು. ಶಾರ್ದೂಲ್ ಠಾಕೂರ್ ಮತ್ತು ರಿಂಕು ಸಿಂಗ್ ಅವರ ಶತಕದ ಜೊತೆಯಾಟದಿಂದ ಕೆಕೆಆರ್ 204 ರನ್ ಗಳಿಸಿತು.
3/ 8
ಗುರಿ ಬೆನ್ನಟ್ಟಿದ ಆರ್‌ಸಿಬಿಯಲ್ಲಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಮೇಲೆ ನೆಟ್ಟಿತ್ತು. ಆದರೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳ ಬಲೆಗೆ ಸಿಲುಕಿದರು. ಬಳಿಕ ವಿಕೆಟ್‌ಗಳ ಪತನ ಆರಂಭವಾಯಿತು.
4/ 8
ಸಂಪೂರ್ಣ ತಂಡ ಕೇವಲ 123 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಕೋಲ್ಕತ್ತಾ 81 ರನ್‌ಗಳಿಂದ ಗೆದ್ದುಕೊಂಡಿತು. ಇದು ಕೆಕೆಆರ್‌ನ ಎರಡನೇ ಅತಿ ದೊಡ್ಡ ಗೆಲುವಾಗಿದೆ.
5/ 8
ಪಂದ್ಯದ ನಂತರ, RCB ನಾಯಕ ಫಾಫ್ ಡು ಪ್ಲೆಸಿಸ್ ಸಾಕಷ್ಟು ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ RCB ನಾಯಕ ಮಾತಾನಡಿದ್ದು ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಸೋತಿರುವುದಕ್ಕೆ ಕಾರಣ ಏನೆಂದು ತಿಳಿಸಿದ್ದಾರೆ.
6/ 8
ಹೌದು, ಪಂದ್ಯದ ಬಳಿಕ ಮಾತನಾಡಿದ ಅವರು, ಒಂದು ಹಂತದಲ್ಲಿ ನಾವು ಅವರನ್ನು ಬೇಗನೆ ಔಟ್ ಮಾಡುವ ಸನಿಹದಲ್ಲಿದ್ದೆವು. ಆದರೆ ಶಾರ್ದೂಲ್ ಅದ್ಭುತ ಬ್ಯಾಟಿಂಗ್ ಮಾಡಿದರು.
7/ 8
ನಾವು 20-25 ರನ್ ಹೆಚ್ಚು ಬಿಟ್ಟುಕೊಟ್ಟಿದ್ದೇವೆ. ನಮ್ಮ ಬ್ಯಾಟಿಂಗ್ ತುಂಬಾ ಸಾಧಾರಣವಾಗಿತ್ತು. ಅವರ ಸ್ಪಿನ್ನರ್‌ಗಳು ನಮ್ಮ ತಂಡವನ್ನು ಚೆನ್ನಾಗಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
8/ 8
160 ರನ್ಗೆ ಅವರನ್ನು ಕಟ್ಟಿಹಾಕಿದ್ದರೆ ಈ ಪಂದ್ಯ ನಮ್ಮದಾಗುತ್ತಿತ್ತು. ಈ ಪಂದ್ಯದಿಂದ ಕಲಿಯಲು ಪ್ರಯತ್ನಿಸುತ್ತೇವೆ. ನಾವು ಹಲವಾರು ತಪ್ಪುಗಳನ್ನು ಮಾಡಿದ್ದೇವೆ. ಡೆತ್ ಬೌಲಿಂಗ್ ಎಡವಿದ್ದೇವೆ ಮತ್ತು ಬ್ಯಾಟಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಹೇಳಿದ್ದಾರೆ.