IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

Virat vs Dhoni: ಈ ಋತುವಿನಲ್ಲಿ ಧೋನಿ ಅವರ ಅದ್ಭುತ ಪ್ರದರ್ಶನಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಐಪಿಎಲ್​ ಸೀಸನ್​ನಲ್ಲಿ ಮಿಸ್ಟರ್ ಕೂಲ್ ಎರಡು ಅಪರೂಪದ ದಾಖಲೆಗಳನ್ನು ಮಾಡುವ ಸಾಧ್ಯತೆಗಳಿವೆ.

First published:

 • 18

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪ್ರಸ್ತುತ 41 ವರ್ಷ ವಯಸ್ಸಾಗಿದೆ. ಕ್ರೀಡಾ ಪಂಡಿತರ ಪ್ರಕಾರ ಇದು ಧೋನಿಯ ಕೊನೆಯ ಸೀಸನ್. ಈ ಋತುವಿನಲ್ಲಿ ಧೋನಿ ವಿದಾಯಕ್ಕೆ ಅದ್ಧೂರಿ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂಬ ವರದಿಗಳೂ ಇವೆ.

  MORE
  GALLERIES

 • 28

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಇದರೊಂದಿಗೆ ಈ ಸೀಸನ್‌ನಲ್ಲಿ ಧೋನಿ ಬ್ಯಾಟಿಂಗ್​ ನೊಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಋತುವಿನಲ್ಲಿ, ಅವರು ಎರಡು ಅಪರೂಪದ ದಾಖಲೆಗಳನ್ನು ಸೃಷ್ಟಿಸಲು ಸಿದ್ಧರಾಗಿದ್ದಾರೆ.

  MORE
  GALLERIES

 • 38

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಮಹೇಂದ್ರ ಸಿಂಗ್ ಧೋನಿ ಅವರ ಮೊದಲ ದಾಖಲೆಯು ನಾಯಕತ್ವಕ್ಕೆ ಸಂಬಂಧಿಸಿದೆ. ಧೋನಿ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ರೋಹಿತ್ ಶರ್ಮಾ ನಂತರ ಚೆನ್ನೈ 4 ಪ್ರಶಸ್ತಿಗಳೊಂದಿಗೆ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿದೆ.

  MORE
  GALLERIES

 • 48

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಆದಾಗ್ಯೂ, ನಾಯಕನಾಗಿ ರನ್‌ಗಳ ವಿಷಯದಲ್ಲಿ ಧೋನಿ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಧೋನಿಗಿಂತಲೂ ವಿರಾಟ್ ಕೊಹ್ಲಿ ಮುಂದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ನಾಯಕನಾಗಿ 4,881 ರನ್ ಗಳಿಸಿದ್ದಾರೆ.

  MORE
  GALLERIES

 • 58

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಏತನ್ಮಧ್ಯೆ, ಜಡೇಜಾ ಅವರಿಂದ ನಾಯಕತ್ವವನ್ನು ಮರಳಿ ಪಡೆದ ನಂತರ ಧೋನಿ ಸಿಎಸ್‌ಕೆಯನ್ನು ಮುನ್ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಧೋನಿ 4,556 ರನ್ ಗಳಿಸಿದ್ದಾರೆ.

  MORE
  GALLERIES

 • 68

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರಲ್ಲಿ 326 ರನ್ ಗಳಿಸಿದರೆ, ಈ ಟೂರ್ನಿಯ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆದರೆ ಈ ವಯಸ್ಸಿನಲ್ಲಿ ಧೋನಿ ದಾಖಲೆಗಳಿಗಾಗಿ ಆಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು.

  MORE
  GALLERIES

 • 78

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಸಿಎಸ್ ಕೆಗೆ ದಾಖಲೆಗಿಂತ ಭವಿಷ್ಯದ ನಾಯಕನನ್ನು ನೀಡುವುದು ಪ್ರಮುಖವಾಗಿದೆ. ಮಹೇಂದ್ರ ಸಿಂಗ್ ಧೋನಿ ಈ ಋತುವಿನಲ್ಲಿ ಸಿಎಸ್‌ಕೆ ಪರ ಸಿಕ್ಸರ್‌ಗಳ ದಾಖಲೆಯನ್ನು ಮುರಿಯಬಹುದು. ಪ್ರಸ್ತುತ, ಮಹಿ ಚೆನ್ನೈ ಸೂಪರ್ ಕಿಂಗ್ಸ್ ಪರ 199 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಬಾರಿ ಜಸ್ಟ್​ 1 ಸಿಕ್ಸ್ ಬಾರಿಸಿದರೆ 200 ಸಿಕ್ಸ್ ಸಿಡಿಸಿದ ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಲಿದ್ದಾರೆ.

  MORE
  GALLERIES

 • 88

  IPL 2023: ಅಪಾಯದಲ್ಲಿ ಕೊಹ್ಲಿ ದಾಖಲೆ, ನಾಯಕನಾಗಿ ವಿರಾಟ್​ ರೆಕಾರ್ಡ್​ ಬ್ರೇಕ್​ ಮಾಡ್ತಾರಾ ಧೋನಿ?

  ಕಳೆದ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅಷ್ಟು ಚೆನ್ನಾಗಿರಲಿಲ್ಲ. ಕಳೆದ ಋತುವಿನಲ್ಲಿ ಚೆನ್ನೈ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದಿತ್ತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಂತಿಮ ಎರಡನೇ ಸ್ಥಾನ ಪಡೆದಿತ್ತು.

  MORE
  GALLERIES