ಐಪಿಎಲ್ 2023 (IPL 2023) ಅಂತಿಮ ಹಂತಕ್ಕೆ ತಲುಪಿದೆ. ಹಲವು ಆಟಗಾರರು ತಮ್ಮ ಆಟದ ಶೈಲಿಯಿಂದ ಮಿಂಚುತ್ತಿದ್ದರೆ ಇನ್ನು ಕೆಲವರು ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಟಿ20 ಲೀಗ್ ನ 16ನೇ ಸೀಸನ್ ನಲ್ಲಿ ಕಡಿಮೆ ಸಂಭಾವನೆ ಪಡೆಯುವ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಕೋಟ್ಯಂತರ ರೂಪಾಯಿ ತೆಗೆದುಕೊಂಡ ಆಟಗಾರರು ಫ್ಲಾಪ್ ಆಗುತ್ತಿದ್ದಾರೆ. ತೆಗೆದುಕೊಂಡ ಹಣಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ.