ಇದಕ್ಕೆ ಉತ್ತರವಾಗಿ ಗುಜರಾತ್ ತಂಡ ವೃದ್ಧಿಮಾನ್ ಸಹಾ ಅವರ ಅಜೇಯ 67 ರನ್‌ಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಧೋನಿ ಮುಂದಿರುವ ಮತ್ತೊಂದು ದೊಡ್ಡ ಸವಾಲೆಂದರೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್. ಐಪಿಎಲ್‌ನಲ್ಲಿ ಇಬ್ಬರ ನಡುವೆ ಇದುವರೆಗೆ 34 ಪಂದ್ಯಗಳು ನಡೆದಿವೆ. ಸಿಎಸ್‌ಕೆ ತಂಡ ಕೇವಲ 14 ಪಂದ್ಯಗಳನ್ನು ಗೆಲ್ಲಲು ಶಕ್ತವಾಗಿದೆ. ಮತ್ತೊಂದೆಡೆ ಮುಂಬೈ ತಂಡ 20 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.