ಇನ್ನು, ವಿಲ್ ಜಾಕ್ಸ್ ಅವರು ತಂಡದಿಂದ ಹೊರನಡೆದ ಹಿನ್ನಲೆ ಅವರ ಸ್ಥಾನಕ್ಕೆ ಆರ್ಸಿಬಿ ಫ್ರಾಂಚೈಸಿಯು ನ್ಯೂಜಿಲೆಂಡ್‌ನ ಸ್ಟಾರ್ ಆಲ್ರೌಂಡರ್ ಮಿಚೆಲ್ ಬ್ರಾಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಿಚೆಲ್ ಬ್ರಾಸ್‌ವೆಲ್ ಇದುವರೆಗೂ ನ್ಯೂಜಿಲೆಂಡ್ ಪರ 6 ಟೆಸ್ಟ್, 19 ಏಕದಿನ ಹಾಗೂ 16 ಟಿ20 ಪಂದ್ಯವಾಡಿದ್ದಾರೆ.