IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

IPL 2023 Final: ಸುನಿಲ್ ಗವಾಸ್ಕರ್ ಮತ್ತು ಸೈಮನ್ ಡೌಲ್ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 5 ನಿಮಿಷಗಳ ಕಾಲ ಅಂಪೈರ್‌ಗಳೊಂದಿಗೆ ವಾದ ಮಾಡುವುದು ಒಳ್ಳೆಯದಲ್ಲ ಮತ್ತು ಇದು ಅನಗತ್ಯ ಕೃತ್ಯವಾಗಿದೆ. ಒಟ್ಟಿನಲ್ಲಿ ಧೋನಿಯಿಂದ ಈ ರೀತಿಯ ವರ್ತನೆಯನ್ನು ನಿರೀಕ್ಷಿಸದ ಜನ ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ.

First published:

  • 18

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ ಸೀಸನ್ 16ರ ಫೈನಲ್ ತಲುಪಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ 15 ರನ್‌ಗಳಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತು. ಇದು 10ನೇ ಬಾರಿ ಈ ಸಾಧನೆ ಮಾಡಿದೆ. 2021ರ ಸೀಸನ್‌ನ ಚಾಂಪಿಯನ್‌ ಆಗಿರುವ ಸಿಎಸ್‌ಕೆ ಇದೇ ತಿಂಗಳ 28ರಂದು ಫೈನಲ್‌ ಪಂದ್ಯವನ್ನು ಆಡಲಿದೆ.

    MORE
    GALLERIES

  • 28

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಈ ಪಂದ್ಯದಲ್ಲಿ ಸೋತರೂ ಗುಜರಾತ್‌ಗೆ ಫೈನಲ್‌ ಭರವಸೆ ಇದೆ. ಕ್ವಾಲಿಫೈಯರ್ 2ರಲ್ಲಿ ಗೆದ್ದರೆ ಟೈಟನ್ ಫೈನಲ್ ತಲುಪಲಿದೆ. ಕ್ವಾಲಿಫೈಯರ್​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗುಜರಾತ್​ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್ ಗಳಿಸಿ ಸೋಲನುಭವಿಸಿದರು. ಚೆನ್ನೈ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ತಂಡವನ್ನು ಫೈನಲ್‌ಗೆ ತಲುಪಿಸಿದರು.

    MORE
    GALLERIES

  • 38

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಏತನ್ಮಧ್ಯೆ, ಫೈನಲ್‌ಗೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಆಘಾತಕ್ಕೊಳಗಾಗುವ ಸಾಧ್ಯತೆಯಿದೆ. ಕ್ರಿಕೆಟ್ ಮೂಲಗಳ ಪ್ರಕಾರ ಆ ತಂಡದ ನಾಯಕ ಎಂಎಸ್ ಧೋನಿ ಮೇಲೆ ಒಂದು ಪಂದ್ಯದ ನಿಷೇಧದ ಸಾಧ್ಯತೆ ಇದೆ.

    MORE
    GALLERIES

  • 48

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-1ರ 16ನೇ ಓವರ್‌ನಲ್ಲಿ ಧೋನಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದು ಗೊತ್ತೇ ಇದೆ. ಧೋನಿ ಸುಮಾರು 4 ನಿಮಿಷ ವ್ಯರ್ಥ ಮಾಡಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ, ಧೋನಿಗೆ ದಂಡ ಅಥವಾ ಒಂದು ಪಂದ್ಯ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಲವು ಲೇಖನಗಳು ಪ್ರಕಟವಾಗಿದೆ.

    MORE
    GALLERIES

  • 58

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಅವರು ಉದ್ದೇಶಪೂರ್ವಕವಾಗಿ ಅಂಪೈರ್‌ಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಐಪಿಎಲ್ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಧೋನಿ ತಪ್ಪು ಮಾಡಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಐಪಿಎಲ್ ನೀತಿ ಸಂಹಿತೆ ಪ್ರಕಾರ ಧೋನಿ ಮೇಲೆ ಒಂದು ಪಂದ್ಯ ನಿಷೇಧ ಹೇರುವ ಸಾಧ್ಯತೆ ಇದೆ.

    MORE
    GALLERIES

  • 68

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಹೀಗಾದರೆ ಧೋನಿ ಫೈನಲ್‌ನಿಂದ ದೂರ ಉಳಿಯುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಐಪಿಎಲ್ ನೀತಿ ಸಂಹಿತೆ ನಿಯಮ 14.2.3ರ ಪ್ರಕಾರ, ಪಂದ್ಯದ ವೇಳೆ 8 ನಿಮಿಷಕ್ಕಿಂತ ಹೆಚ್ಚು ಕಾಲ ಮೈದಾನದಲ್ಲಿ ಇಲ್ಲದಿದ್ದಲ್ಲಿ ಅಂಪೈರ್‌ಗಳಿಗೆ ಆಟಗಾರನ ಮೇಲೆ ನಿಯಮಗಳನ್ನು ಹೇರಲು ಅವಕಾಶವಿದೆ.

    MORE
    GALLERIES

  • 78

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಒಂಬತ್ತು ನಿಮಿಷಗಳ ಕಾಲ ಪಂದ್ಯದಿಂದ ಹೊರಗುಳಿದ ಮತಿಶಾ ಪತಿರಾಣ ಅವರಿಗೆ ಬೌಲಿಂಗ್ ಮಾಡಲು ಅಂಪೈರ್‌ಗಳು ನಿರಾಕರಿಸಿದರು. ನಿಯಮಗಳು ಸ್ಪಷ್ಟವಾಗಿದ್ದರೂ - ಅಂಪೈರ್‌ಗಳೊಂದಿಗೆ ಧೋನಿ ವಾಗ್ವಾದ ಮಾಡಿದ್ದು ಐದು ನಿಮಿಷ ವ್ಯರ್ಥ ಎಂದು ಆಡಳಿತ ಮಂಡಳಿ ಭಾವಿಸಿದೆ.

    MORE
    GALLERIES

  • 88

    IPL 2023 Final: ಚೆನ್ನೈ ಅಭಿಮಾನಿಗಳಿಗೆ ಬಿಗ್​ ಶಾಕ್​! ಫೈನಲ್​ ಪಂದ್ಯದಿಂದ ಧೋನಿ ಔಟ್​?

    ಸುನಿಲ್ ಗವಾಸ್ಕರ್ ಮತ್ತು ಸೈಮನ್ ಡೌಲ್ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 5 ನಿಮಿಷಗಳ ಕಾಲ ಅಂಪೈರ್‌ಗಳೊಂದಿಗೆ ವಾದ ಮಾಡುವುದು ಒಳ್ಳೆಯದಲ್ಲ ಮತ್ತು ಇದು ಅನಗತ್ಯ ಕೃತ್ಯವಾಗಿದೆ. ಒಟ್ಟಿನಲ್ಲಿ ಧೋನಿಯಿಂದ ಈ ರೀತಿಯ ವರ್ತನೆಯನ್ನು ನಿರೀಕ್ಷಿಸದ ಜನ ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ.

    MORE
    GALLERIES