ಯುವ ಆಟಗಾರರು ಅನುಜ್ ರಾವತ್, ಸುಯಶ್ ಪ್ರಭು ದೇಸಾಯಿ, ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೋರ್ ತಂಡದಲ್ಲಿದ್ದರೂ ಗೆಲುವಿನ ಇನ್ನಿಂಗ್ಸ್ ಆಡುತ್ತಿಲ್ಲ. ಕಳೆದ ಸೀಸನ್ ನಲ್ಲಿ ಫಿನಿಶರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್ ಈ ವರ್ಷ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ರಜತ್ ಪಾಟಿದಾರ್ ಅವರ ಅನುಪಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತಿದೆ.