IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

IPL 2023: ಐಪಿಎಲ್ 2023ರ 16ನೇ ಋತುವಿನ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮೆಗಾ ಟೂರ್ನಿಗಾಗಿ ಆರ್​ಸಿಬಿ ತಂಡವು ಭರ್ಜರಿ ಅಭ್ಯಾಸ ಆರಂಭಿಸಿವೆ. ಇದರ ನಡುವೆ ಮಾಜಿ ಆಟಗಾರ ಆಕಾಶ್ ಚೋಪ್ರಾ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

First published:

  • 18

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಮಾರ್ಚ್​ 31ರಿಂದ ಐಪಿಎಲ್​ 2023ರ 16ನೇ ಸೀಸನ್​ ಆರಂಭವಾಗಲಿದಗದು, ಮೊದಲ ಪಂದ್ಯದಲ್ಲಿ ಗುಜರಾತ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳು ಸೆಣಸಾಡಲಿದೆ. ಈ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

    MORE
    GALLERIES

  • 28

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಐಪಿಎಲ್ 2023ರ 16ನೇ ಋತುವಿನ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮೆಗಾ ಟೂರ್ನಿಗಾಗಿ ಆರ್​ಸಿಬಿ ತಂಡವು ಭರ್ಜರಿ ಅಭ್ಯಾಸ ಆರಂಭಿಸಿವೆ. ಇದರ ನಡುವೆ ಮಾಜಿ ಆಟಗಾರ ಆಕಾಶ್ ಚೋಪ್ರಾ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

    MORE
    GALLERIES

  • 38

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಹೌದು, ಮಾಜಿ ಆಟಗಾರ ಆಕಾಶ್ ಚೋಪ್ರಾ ಈ ಕುರಿತು ಮಾತನಾಡಿದ್ದು, ಆರ್‌ಸಿಬಿ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಆಕಾಶ್ ಚೋಪ್ರಾ ಅವರ ಮಾತುಗಳು ಇದೀಗ ಆರ್​ಸಿಬಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

    MORE
    GALLERIES

  • 48

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಈ ಬಾರಿ ಬೆಂಗಳೂರು ತಂಡವು ಟಾಪ್-3ಗೂ ಪ್ರವೇಶಿಸುವುದಿಲ್ಲ ಎಂದು ಚೋಪ್ರಾ ಹೇಳಿದ್ದಾರೆ. ಆರ್​ಸಿಬಿ ಹೋಮ್​ ಗ್ರೌಂಡ್​ನಲ್ಲಿ ಆಡವುದು ತಂಡಕ್ಕೆ ದೊಡ್ಡ ಸಮಸ್ಯೆ ಆಗಲಿದೆ. ಇದರಿಂದಾಗಿ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿಹೆಚ್ಚೆಂದರೆ 4 ರಿಂದ 6ರ ಸ್ಥಾನದ ನಡುವೆ ಇರಲಿದೆ ಎಂದಿದ್ದಾರೆ.

    MORE
    GALLERIES

  • 58

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಈ ಮೂಲಕ ಆರ್​ಸಿಬಿ ಈ ಬಾರಿಯೂ ಚಾಂಪಿಯನ್​ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಜೊತೆಗೆ ಜೋಶ್ ಹ್ಯಾಜಲ್‌ವುಡ್ ಇಲ್ಲದಿದ್ದರೆ ತಂಡದ ಬೌಲಿಂಗ್ ದುರ್ಬಲವಾಗಬಹುದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 68

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಆರ್​ಸಿಬಿ ಬೌಲಿಂಗ್ ವಿಭಾಗ ಉತ್ತಮವಾಗಿ ಕಾಣುತ್ತದೆ. ಆದರೆ ಜೋಶ್ ಹ್ಯಾಜಲ್‌ವುಡ್ ಇಲ್ಲದಿದ್ದರೆ ಅದು ತಂಡವನ್ನು ತುಂಬಾ ದುರ್ಬಲಗೊಳಿಸುತ್ತದೆ. ಅವರ ಸ್ಥಾನವನ್ನು ಇದ್ದವರಲ್ಲಿ ಯಾರಿಗೂ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ.

    MORE
    GALLERIES

  • 78

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಇನ್ನು, ಆರ್​ಸಿಬಿ ಐಪಿಎಲ್​ 2023ರ ಮೊದಲ ಪಂದ್ಯವನ್ನು ಎಪ್ರಿಲ್​ 2ರಂದು ಮುಂಬೈ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್​ಗಳು ಈಗಾಗಲೇ ಸೋಲ್ಡ್​ಔಟ್​ ಆಗಿದೆ.

    MORE
    GALLERIES

  • 88

    IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    2023 ಐಪಿಎಲ್​ಗೆ ಆರ್​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

    MORE
    GALLERIES