RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

Rcb Playoff Scenario: ಐಪಿಎಲ್​ 2023 ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ರೋಚಕತೆ ಹೆಚ್ಚುತ್ತಿದೆ. ಅದರಲ್ಲಿಯೂ ಇದೀಗ ಮುಂಬೈ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್ ಗೆದ್ದ ಬಳಿಕ ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣವಾಗಿದೆ.

First published:

  • 110

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ 5 ರನ್​ಗಳ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಲಕ್ನೋ ಸೂಪರ್​ ಜೈಂಟ್ಸ್ 15 ಅಂಕದ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

    MORE
    GALLERIES

  • 210

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಹೌದು, ಮುಂಬೈ ತಂಡದ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​ ರೋಚಕ ಗೆಲುವು ದಾಖಲಿಸುವ ಮೂಲಕ ತನ್ನ ಪ್ಲೇಆಫ್​ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಆದರೆ ಆರ್​ಸಿಬಿ ಪ್ಲೇಆಫ್​ ಹಾದಿ ಕಠಿಣವಾಗಿದೆ.

    MORE
    GALLERIES

  • 310

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ರಾಜಸ್ಥಾನ್ ರಾಯಲ್ಸ್ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು (RCB) ಪ್ಲೇಆಫ್​ ಲೆಕ್ಕಚಾರ ಬದಲಾಗಿತ್ತು. ಆ ಮೂಲಕ ಆರ್​ಸಿಬಿ ತಂಡದ ಪ್ಲೇಆಫ್​ ಕನಸೂ ಸಹ ಜೀವಂತವಾಗಿ ಉಳಿದಿತ್ತು.

    MORE
    GALLERIES

  • 410

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಆರ್​ಸಿಬಿ ಗೆಲುವಿನ ಬಳಿಕ  +0.166 ನೆಟ್​ ರನ್​ರೇಟ್ ಹೊಂದುವ ಮೂಲಕ ಪ್ಲೇಆಫ್​ ರೇಸ್​ನಲ್ಲಿ ಉಳಿದಿತ್ತು. ಅಲ್ಲದೇ 12 ಪಂದ್ಯಗಳಲ್ಲಿ 6ರಲ್ಲಿ ಸೋತು 6ರಲ್ಲಿ ಗೆದ್ದು 12 ಅಂಕ ಗಳಿಸಿದ್ದು, +0.116 ನೆಟ್​ ರನ್​ರೇಟ್​ ಮೂಲಕ 5ನೇ ಸ್ಥಾನಕ್ಕೇರಿದೆ.

    MORE
    GALLERIES

  • 510

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಇನ್ನು, ಮುಂಬೈ ತಂಡ ಸೋತಿದ್ದು, 14 ಅಂಕಗಳೊಂದಿಗೆ -0.128 ರನ್​ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಲಕ್ನೋ ತಂಡ 15 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದೆ.

    MORE
    GALLERIES

  • 610

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಈ ಗೆಲುವಿನಿಂದಾಗಿ ಲಕ್ನೋ ತಂಡ 15 ಅಂಕ ಪಡೆದಿದ್ದು, ಇನ್ನೊಂದು ಅಂತಿಮ ಪಂದ್ಯ ಗೆದ್ದರೆ 17 ಅಂಕವಾಗುತ್ತದೆ. ಆಗ ತಂಡ ನೇರವಾಗಿ ಈ ಬಾರಿಯ ಪ್ಲೇಆಫ್​ ಪ್ರವೇಶಿಸಲಿದೆ. ಇದು ಆರ್​ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

    MORE
    GALLERIES

  • 710

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಏಕೆಂದರೆ, ಆರ್​ಸಿಬಿ ತಂಡಕ್ಕೆ ಇನ್ನೂ 2 ಪಂದ್ಯವಿದ್ದು, 2 ಪಂದ್ಯವನ್ನು ಗೆದ್ದರೆ 16 ಅಂಕವಾಗಲಿದೆ. ಆಗ ಲಕ್ನೋ ತಂಡ 17 ಅಂಕದಿಂದ ಆರ್​ಸಿಬಿಗಿಂತ ಮುಂದಿರುತ್ತದೆ. ಅಲ್ಲದೇ ಚೆನ್ನೈಗೂ ಸಹ ಒಂದು ಪಂದ್ಯವಿದ್ದು ಆ ಪಂದ್ಯ ಗೆದ್ದರೆ ಚೆನ್ನೈ ಸಹ 17 ಅಂಕ ಪಡೆಯುತ್ತದೆ.

    MORE
    GALLERIES

  • 810

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಇದರಿಂದಾಗಿ ಈಗಾಗಲೇ ಗುಜರಾತ್​ ಟೈಟನ್ಸ್ ಪ್ಲೇಆಫ್​ ಪ್ರವೇಶಿಸಿದೆ. ಆದರೆ ಚೆನ್ನೈ ಮತ್ತು ಲಕ್ನೋ ತಂಡಗಳು ಉಳಿದ ಒಂದು ಪಂದ್ಯ ಗೆದ್ದು 17 ಅಂಕದೊಂದಿಗೆ ಸಮಬಲದ ಹೋರಾಟ ನಡೆಸಿದರೂ ರನ್​ರೇಟ್​ ಆಧಾರದ ಮೇಲೆ ಪ್ಲೇಆಫ್​ ಪ್ರವೇಶಿಸಲಿದೆ.

    MORE
    GALLERIES

  • 910

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಆದರೆ, ಆರ್​ಸಿಬಿ ತಂಡಕ್ಕೆ 4ನೇ ಸ್ಥಾನದ ಮೂಲಕ ಪ್ಲೇಆಫ್​ ಪ್ರವೇಶಿಸಲು ಒಂದು ಅವಕಾಶವಿದ್ದು, ಅದಕ್ಕೆ ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಸೋಲಬೇಕು. ಇಲ್ಲವಾದ್ದಲ್ಲಿ ಗೆದ್ದರೂ ಸಹ ಕಡಿಮೆ ಅಂತರದಿಂದ ಗೆಲ್ಲಬೇಕು. ಇತ್ತ ಆರ್​ಸಿಬಿ ಉಳಿದ 2 ಪಂದ್ಯವನ್ನು ಭರ್ಜರಿಯಾಗಿ ಗೆದ್ದರೆ, ಮುಂಬೈ ಮತ್ತು ಆರ್​ಸಿಬಿ 16 ಅಂಕ ಪಡೆದು ರನ್​ರೇಟ್​ ಆಧಾರದ ಮೇಲೆ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲಿದೆ.

    MORE
    GALLERIES

  • 1010

    RCB Playoff Scenario: ಆರ್​ಸಿಬಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣ, ಮತ್ತೆ ಲೆಕ್ಕಾಚಾರಕ್ಕೆ ಕುಳಿತ ಫಾಫ್​ ಪಡೆ

    ಇಲ್ಲವಾದ್ದಲ್ಲಿ, ಆರ್​ಸಿಬಿ ಮುಂದಿನ 2 ಪಂದ್ಯ ಗೆದ್ದರೆ 16 ಅಂಕವಾಗಲಿದೆ. ಇತ್ತ ಚೆನ್ನೈ ಮತ್ತು ಲಕ್ನೋ ಉಳಿದ ಒಂದು ಪಂದ್ಯ ಸೋತರೆ 15 ಪಾಯಿಂಟ್​ ಉಳಿಯಲಿದ್ದು, ಆಗ ಆರ್​ಸಿಬಿ ನೇರವಾಗಿ 2ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್​ಗೆ ಎಂಟ್ರಿ ನೀಡುತ್ತದೆ.

    MORE
    GALLERIES