MS Dhoni: ಇಂದಿನ ಪಂದ್ಯವೇ ಧೋನಿಗೆ ಕೊನೆಯ ಐಪಿಎಲ್ ಆಗಲಿದೆಯೇ? ನಿವೃತ್ತಿ ಕುರಿತು ಮಾತನಾಡಿದ ಕ್ಯಾಪ್ಟನ್ ಕೂಲ್
4 ಬಾರಿ ಐಪಿಎಲ್ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂದು ತನ್ನ ಐಪಿಎಲ್ 2022ರ ಲೀಗ್ ನ ಕೊನೇಯ ಪಂದ್ಯವನ್ನು ಆಡುತ್ತಿದೆ. ಅಲ್ಲದೇ ಈ ಬಾರಿ ಕಳಪೆ ಪ್ರದರ್ಶನದಿಂದ ತಂಡ ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಇದರ ನಡುವೆ ಇಂದಿನ ಪಂದ್ಯ ಮಹೇಂದ್ರ ಸಿಂಗ್ ಧೋನಿಗೂ ಕೊನೆಯ ಪಂದ್ಯ ಎಂಬ ಮಾತು ಕೇಳಿ ಬರುತ್ತಿದೆ.

2/ 6
ಇದರ ನಡುವೆ ಧೋನಿ ಇಂದಿನ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವೇ ಕೊನೆಯ ಪಂದ್ಯವಾಗಲಿದೆಯೇ ಎಂದು ಎಲ್ಲಡೇ ಚರ್ಚೆಗಳು ಆರಂಭವಾಗಿದೆ. ಆದರೆ ಇವುಗಳಿಗೆ ಧೋನಿ ಉತ್ತರ ನೀಡಿದ್ದು, ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
3/ 6
ನಿವೃತ್ತಿ ಕುರಿತು ಮನಬಿಚ್ಚಿ ಮಾತನಾಡಿದ ಧೋನಿ, ‘ಖಂಡಿತವಾಗಿಯೂ, ಚೆನ್ನೈಗೆ ಧನ್ಯವಾದ ಹೇಳದಿರುವುದು ಅನ್ಯಾಯವಾಗುತ್ತದೆ. ಸಿಎಸ್ಕೆ ಅಭಿಮಾನಿಗಳಿಗೆ ಹಾಗೆ ಮಾಡುವುದು ಒಳ್ಳೆಯದಲ್ಲ’ ಎಂದಿದ್ದಾರೆ.
4/ 6
41 ವರ್ಷ ವಯಸ್ಸಿನ ಧೋನಿ ಮುಂದಿನ ಐಪಿಎಲ್ ಆಡವುದಿಲ್ಲ ಎಂಬ ಮಾತುಗಳು ಹೆಚ್ಚು ಕೇಳಿಬರಲು ಆರಂಭವಾದ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ #DefinitelyNot ಎಂಬ ಪದ ಟ್ರೆಂಡಿಂಗ್ ಆಗಿದೆ.
5/ 6
ಇವುಗಳ ನಡುವೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವೀಟರ್ ನಲ್ಲಿ Definitely Yes! ಎಂದು ಟ್ಔಈಟ್ ಮಾಡುವ ಮೂಲಕ ಕ್ರೀಡಾಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಲಾಗಿದೆ.
6/ 6
ಇಷ್ಟೆಲ್ಲಾ ಮಾತುಗಳು ಜಕೇಳಿಬರುತ್ತಿದ್ದ ವೇಳೆ ಇಂದಿನ ಪಂದ್ಯದ ಟಾಸ್ ಸಮಯದಲ್ಲಿ ಧೋನಿ ಇದೆಕ್ಕೆಲ್ಲಾ ಸ್ಪಷ್ಟ ಉತ್ತರ ನೀಡಿದ್ದು, ಮುಂದಿನ ಬಾರಿ ಚೆನ್ನೈ ತಂಡದಲ್ಲಿ ನಾಯಕನಾಗಿ ಇರುತ್ತೇನೆ ಎಂದು ಟಾಸ್ ವೇಳೆ ತಿಳಿಸಿದ್ದಾರೆ. ಆದರೂ ಅಭಿಮಾನಿಗಳಲ್ಲಿ ಧೋನಿ ನಿರ್ಧಾರದ ಬಗ್ಗೆ ಅನುಮಾನಗಳಿವೆ.