IPL 2022 - Umesh Yadav: ಐಪಿಎಲ್ನಲ್ಲಿ ವಿನೂತನ ದಾಖಲೆ ಬರೆದ ಉಮೇಶ್ ಯಾದವ್, ಟಿ20 ಫಾರ್ಮ್ಗೆ ಮತ್ತೆ ಕಂಬ್ಯಾಕ್!
IPL 2022 - Umesh Yadav: ಉಮೇಶ್ ಯಾದವ್ ಈ ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಕೊಲ್ಕತ್ತಾ ಪರ ಮ್ಯಾಷ್ ವಿನ್ನಿಂಗ್ ಪ್ರರ್ದಶನ ನೀಡುತ್ತಿದ್ದಾರೆ. ಅಲ್ಲದೇ ಪ್ರಸ್ತುತ ಹೆಚ್ಚು ವಿಕೆಟ್ ಟೇಕರ್ ಆಗಿರುವ ಅವರು ಪರ್ಫಲ್ ಕ್ಯಾಪ್ ಸಹ ತಮ್ಮದಾಗಿಸಿಕೊಂಡಿದ್ದಾರೆ.
ಉಮೇಶ್ ಯಾದವ್ ಈ ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಕೊಲ್ಕತ್ತಾ ಪರ ಮ್ಯಾಷ್ ವಿನ್ನಿಂಗ್ ಪ್ರರ್ದಶನ ನೀಡುತ್ತಿದ್ದಾರೆ. ಅಲ್ಲದೇ ಪ್ರಸ್ತುತ ಹೆಚ್ಚು ವಿಕೆಟ್ ಟೇಕರ್ ಆಗಿರುವ ಅವರು ಪರ್ಫಲ್ ಕ್ಯಾಪ್ ಸಹ ತಮ್ಮದಾಗಿಸಿಕೊಂಡಿದ್ದಾರೆ.
2/ 7
ಕೋಲ್ಕತ್ತಾ ನೈಟ್ ರೈಡರ್ಸ್ ಈ ಋತುವಿನಲ್ಲಿ ಮೂರು ಪಂದ್ಯಗಳನ್ನು ಆಡಿದೆ.ಉಮೇಶ್ ಯಾದವ್ 8 ವಿಕೆಟ್ಗಳಿಂದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಅಲ್ಲದೇ 4.91ರ ಎಕಾನಮಿಯಲ್ಲಿ ವಿಕೆಟ್ ಕಬಳಿಸುವುದಲ್ಲದೆ ರನ್ಗಳನ್ನು ನಿಯಂತ್ರಿಸುತ್ತಿದ್ದಾರೆ.
3/ 7
ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಉಮೇಶ್ ಯಾದವ್ 4 ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ನೊಂದಿಗೆ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಈ 4 ವಿಕೆಟ್ನೊಂದಿಗೆ ಉಮೇಶ್ ಯಾದವ್ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
4/ 7
ಐಪಿಎಲ್ನಲ್ಲೇ ಒಂದೇ ತಂಡದ ವಿರುದ್ದ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಇದೀಗ ಉಮೇಶ್ ಯಾದವ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಲಸಿತ್ ಮಾಲಿಂಗ ಸಿಎಸ್ಕೆ ವಿರುದ್ದ 31 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಉಮೇಶ್ ಯಾದವ್ ಪಂಜಾಬ್ ವಿರುದ್ದ ಒಟ್ಟು 33 ವಿಕೆಟ್ ಪಡೆಯುವ ಮೂಲಕ ಲಸಿತ್ ಮಾಲಿಂಗ ದಾಖಲೆಯನ್ನು ಮುರಿದಿದ್ದಾರೆ.
5/ 7
ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಪಡೆಯುವ ಮೂಲಕ ಅತ್ಯಧಿಕ ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ವೇಗದ ಬೌಲರ್ ಎಂಬ ದಾಖಲೆಯನ್ನು ಸಹ ಉಮೇಶ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ.
6/ 7
ಈ ಬಾರಿ ಐಪಿಎಲ್ ನ ಮೆಗಾ ಹರಾಜಿನಲ್ಲಿ ಉಮೇಶ್ ಯಾದವ್ ಮೊದಲ ಎರಡು ಸುತ್ತುಗಳಲ್ಲಿ ಮಾರಾಟವಾಗದ ಆಟಗಾರನಾಗಿ ಉಳಿದರು. ಆದರೆ ಕೆಕೆಆರ್ ಮೂರನೇ ಸುತ್ತಿನಲ್ಲಿ ಅವರನ್ನು ಖರೀದಿಸಿತು. ಒಟ್ಟಿನಲ್ಲಿ ಉಮೇಶ್ ಯಾದವ್ ಮತ್ತೊಮ್ಮೆ ಉತ್ತಮ ಫಾರ್ಮ್ ಗೆ ಮರಳಿದ್ದಾರೆ.
7/ 7
ಇದೇ ರೀತಿ ಆಟವನ್ನು ಉಮೇಶ್ ಯಾದವ್ ಮುಂದುವರೆಸಿದರೆ ಮುಂಬರುವ ಐಸಿಸಿ 2022ರ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾಗೆ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ. ಇದರೊಂದಿಗೆ ಅಭಿಮಾನಿಗಳಾದ ಉಮೇಶ್ ಯಾದವ್ಗೆ ನೀವು ಬದಲಾಗಿದ್ದೀರಿ ಸಾರ್, ನಿಮ್ಮಲ್ಲಿನ ಬೆಂಕಿ ನಮಗೆ ಗೊತ್ತಿದೆ ಎಂದೆಲ್ಲಾ ಕಅಮೆಂಟ್ ಮಾಡುತ್ತಿದ್ದಾರೆ.