IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

T20 ಲೀಗ್‌ಗಳಲ್ಲಿ ಸಿಕ್ಸರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಫ್ರ್ಯಾಂಚೈಸ್ ಮಾಲೀಕರು ಯಾವಾಗಲೂ ಅಂತಹ ಆಟಗಾರರನ್ನೇ ಹುಡುಕುತ್ತಿರುತ್ತಾರೆ. ಏಕೆಂದರೆ ಅವರು ಎರಡರಿಂದ ಮೂರು ಓವರ್‌ಗಳಲ್ಲಿ ಪಂದ್ಯದ ಸ್ವರೂಪವನ್ನು ಬದಲಾಯಿಸುತ್ತಾರೆ. ಹಾಗಾಗಿಯೇ ಕ್ರಿಸ್ ಗೇಲ್, ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್ ರಂತಹ ಆಟಗಾರರಿಗೆ ಐಪಿಎಲ್ ಹರಾಜಿನಲ್ಲಿ ಕೊಂಚ ಬೇಡಿಕೆ ಹೆಚ್ಚು. ಐಪಿಎಲ್ 15ನೇ ಸೀಸನ್ ಮಾರ್ಚ್ 26ರಿಂದ ಆರಂಭವಾಗಲಿದ್ದು, ಇದುವರೆಗೆ ಲೀಗ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.

First published:

  • 19

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೆರಿಬಿಯನ್ ಕಿಂಗ್ ಮತ್ತು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಇದ್ದಾರೆ. ಅವರು IPL ನಲ್ಲಿ ಅವರು ಕೋಲ್ಕತ್ತಾ, RCB ಮತ್ತು ಪಂಜಾಬ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಗೇಲ್ ಐಪಿಎಲ್​ ನಲ್ಲಿ ಈವರೆಗೆ ಒಟ್ಟು 142 ಪಂದ್ಯಗಳಿಂದ 367 ಸಿಕ್ಸ್ ಬಾರಿಸುವ ಮೂಲಕ ಐಪಿಎಲ್​ ನಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.

    MORE
    GALLERIES

  • 29

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಆರ್​ಸಿಬಿಯ ಅಭಿಮಾನಿಗಳ ಮೆಚ್ಚಿನ ಆಟಗಾರ ಎಬಿ ಡಿವಿಲಿಯರ್ಸ್ ಇದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 184 ಪಂದ್ಯಗಳನ್ನು ಆಡಿರುವ ಅವರು 251 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಕಳೆದ ವರ್ಷ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ.

    MORE
    GALLERIES

  • 39

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಇದುವರೆಗೆ 213 ಪಂದ್ಯಗಳಲ್ಲಿ 227 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಡಿವಿಲಿಯರ್ಸ್ ವಿದಾಯ ಹೇಳಿರುವುದರಿಂದ ಈ ಬಾರಿ ಐಪಿಎಲ್​ನಲ್ಲಿಅವರ ದಾಖಲೆ ಮುರಿದರೆ ಆಶ್ಚರ್ಯಪಡಬೇಕಾಗಿಲ್ಲ.

    MORE
    GALLERIES

  • 49

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಈವರೆಗೆ 220 ಪಂದ್ಯಗಳಲ್ಲಿ 219 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

    MORE
    GALLERIES

  • 59

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಪವರ್ ಹಿಟ್ಟರ್ ಪೊಲಾರ್ಡ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, 178 ಪಂದ್ಯಗಳಲ್ಲಿ 214 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರು ಮುಂಬೈ ಇಂಡಿಯನ್ಸ್ ಪರ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

    MORE
    GALLERIES

  • 69

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದು, ಹೆಚ್ಚಾಗಿ ಕವರ್ ಡ್ರೈವ್‌ಗಳೊಂದಿಗೆ ಬೌಂಡರಿ ಬಾರಿಸುವ ಕೊಹ್ಲಿ, ಸಿಕ್ಸರ್‌ಗಳನ್ನೂ ಚೆನ್ನಾಗಿ ಬಾರಿಸಿದ್ದಾರೆ. ಅವರು 207 ಪಂದ್ಯಗಳಲ್ಲಿ 210 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

    MORE
    GALLERIES

  • 79

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ, ಮಿ.ಐಪಿಎಲ್ ಎಂದೇ ಪ್ರಸಿದ್ಧರಾಗಿರುವ ಸುರೇಶ್ ರೈನಾ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. 205 ಪಂದ್ಯಗಳಲ್ಲಿ 203 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ ಈ ಬಾರಿ ಖರೀದಿಯಾಗದೆ ಐಪಿಎಲ್​ ನಿಂದ ಹೊರಗುಳಿದಿದ್ದಾರೆ.

    MORE
    GALLERIES

  • 89

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಡೇವಿಡ್ ವಾರ್ನರ್ ಸಿಕ್ಸರ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 150 ಪಂದ್ಯಗಳಲ್ಲಿ 201 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಋತುವಿನ ಅಂತ್ಯದ ವೇಳೆಗೆ ವಾರ್ನರ್ ಟಾಪ್ 5 ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

    MORE
    GALLERIES

  • 99

    IPL 2022: ಸಿಕ್ಸರ್​ ಸಿಡಿಸುವುದಕ್ಕೆ ಇವರೇ ಫೇಮಸ್​, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು

    ಒಂಬತ್ತನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್. 145 ಪಂದ್ಯಗಳಲ್ಲಿ 190 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

    MORE
    GALLERIES