IPL 2022: ಐಪಿಎಲ್ನ ಈ ತಂಡಗಳ ಬ್ರಾಂಡ್ ವ್ಯಾಲ್ಯೂ ಕೇಳಿದ್ರೆ ತಲೆ ತಿರುಗುವುದು ಪಕ್ಕಾ!, ಅತಿ ಹೆಚ್ಚು ಮೌಲ್ಯ ಇರುವ ತಂಡ ಇದಂತೆ
IPL 2022: ಕ್ರಿಕೆಟ್ನಲ್ಲಿ ಐಪಿಎಲ್ಗೆ ಇರುವ ಕ್ರೇಜ್ ಅನ್ನು ಉಲ್ಲೇಖಿಸಬೇಕಾಗಿಲ್ಲ. ಭಾರತ ವಿಶ್ವ ಕ್ರಿಕೆಟ್ನಲ್ಲಿ ಅಗ್ರಸ್ಥಾನದಲ್ಲಿರಲು ಮತ್ತು ಬಿಸಿಸಿಐ ಶ್ರೀಮಂತ ಮಂಡಳಿಯಾಗಲು ಇದೂ ಒಂದು ಕಾರಣ.
ಕ್ರಿಕೆಟ್ನಲ್ಲಿ ಐಪಿಎಲ್ಗೆ ಇರುವ ಕ್ರೇಜ್ ಹೇಳತೀರದು. ಭಾರತ ವಿಶ್ವ ಕ್ರಿಕೆಟ್ನಲ್ಲಿ ಅಗ್ರಸ್ಥಾನದಲ್ಲಿರಲು ಮತ್ತು ಬಿಸಿಸಿಐ ಶ್ರೀಮಂತ ಮಂಡಳಿಯಾಗಲು ಇದೂ ಒಂದು ಕಾರಣ. ಆದರೆ, ಐಪಿಎಲ್ ತಂಡಗಳ ಬ್ರಾಂಡ್ ವ್ಯಾಲ್ಯೂ ಗೊತ್ತಾದರೆ ಮೈಂಡ್ ಬ್ಲಾಕ್ ಮಾಡಿಕೊಳ್ಳಬೇಕು. ಆ ಲೆಕ್ಕಾಚಾರಗಳನ್ನು ಒಮ್ಮೆ ನೋಡಿ.
2/ 11
ಐಪಿಎಲ್ನಲ್ಲಿ ಅತ್ಯಂತ ಕಡಿಮೆ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ರಾಜಸ್ಥಾನ. ಐಪಿಎಲ್ನಲ್ಲಿ ಮೊದಲ ಬಾರಿ ಟ್ರೋಫಿ ರಾಜಸ್ಥಾನ ತಂಡವು ಗೆದ್ದಿತ್ತು. ಇದೀಗ ಈ ತಂಡವು 249 ಕೋಟಿ ರೂ.ಗಳ ಬ್ರಾಂಡ್ ಮೌಲ್ಯವನ್ನು ಹೊಂದಿದೆ.
3/ 11
ಪಂಜಾಬ್ ಕಿಂಗ್ಸ್ ಇದುವರೆಗೆ ಐಪಿಎಲ್ ಪ್ರಶಸ್ತಿ ಗೆಲ್ಲದ ತಂಡವಾಗಿದೆ. ತಂಡದ ಬ್ರ್ಯಾಂಡ್ ಮೌಲ್ಯವು ಅವರ ಕಾರ್ಯಕ್ಷಮತೆಯಷ್ಟೇ ಕಡಿಮೆಯಾಗಿದೆ. ಲೀಗ್ ಹಂತಕ್ಕೆ ಸೀಮಿತವಾಗಿರುವ ತಂಡವು ರೂ. 318 ಕೋಟಿ ಬ್ರಾಂಡ್ ವ್ಯಾಲ್ಯೂ ಹೊಂದಿದೆ.
4/ 11
ದುವರೆಗೆ ಐಪಿಎಲ್ನಲ್ಲಿ ಟ್ರೋಫಿ ಗೆಲ್ಲದ ತಂಡಗಳಲ್ಲಿ ದೆಹಲಿ ಕೂಡ ಸೇರಿದೆ. ಇದರ ವ್ಯಾಲ್ಯೂ 360 ಕೋಟಿ ಹೊಂದಿದೆ.
5/ 11
ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ನಲ್ಲಿ ಬ್ರಾಂಡ್ ಮೌಲ್ಯ ರೂ. 442 ಕೋಟಿ.
6/ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೆ ಟ್ರೋಫಿ ಗೆದ್ದಿಲ್ಲ. ಆದರೂ ತಂಡದ ಬ್ರ್ಯಾಂಡ್ ಮೌಲ್ಯ ರೂ. 536 ಕೋಟಿ.
7/ 11
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನೇತೃತ್ವದ ಕೆಕೆಆರ್ ಬ್ರಾಂಡ್ ಮೌಲ್ಯ ರೂ. 543 ಕೋಟಿ. ಈ ಫ್ರಾಂಚೈಸಿ ಎರಡು ಬಾರಿ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದೆ.
8/ 11
ನಾಲ್ಕು ಬಾರಿ ಐಪಿಎಲ್ ವಿಜೇತ ಮತ್ತು 9 ಬಾರಿ ಫೈನಲಿಸ್ಟ್ ಆಗಿರುವ ಸಿಎಸ್ಕೆ ಬ್ರಾಂಡ್ ಮೌಲ್ಯ ರೂ. 2,500 ಕೋಟಿ. ಕ್ಯಾಶ್ ರಿಚ್ ಲೀಗ್ನಲ್ಲಿ ಚೆನ್ನೈ ಅತ್ಯಂತ ಯಶಸ್ವಿ ತಂಡ ಎಂದು ಹೆಸರುವಾಸಿಯಾಗಿದೆ.
9/ 11
ಐದು ಬಾರಿಯ ಚಾಂಪಿಯನ್ ಆದ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ಬ್ರಾಂಡ್ ಮೌಲ್ಯ ರೂ. 2,700 ಕೋಟಿ. ಮುಂಬೈ ಐಪಿಎಲ್ನಲ್ಲಿ ಅಗ್ರ ಬ್ರಾಂಡ್ ಮೌಲ್ಯವಾಗಿದೆ.
10/ 11
ಈ ವರ್ಷ ಐಪಿಎಲ್ ಗೆ ಎರಡು ಹೊಸ ತಂಡಗಳು ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಚಾರ. ಅವುಗಳಲ್ಲಿ ಒಂದು ಲಕ್ನೋ, ಕಳೆದ ವರ್ಷ ಹರಾಜು ಪ್ರಕ್ರಿಯೆಯಲ್ಲಿ ಸಂಜೀವ್ ಗೋಯೆಂಕಾ ನೇತೃತ್ವದಲ್ಲಿ 7,090 ಕೋಟಿ ರೂ ಗೆ ಖರೀಧಿಸಿತ್ತು.
11/ 11
ಐಪಿಎಲ್ಗೆ ಹೊಸಬರಾದ ಲಕ್ನೋದಂತೆ, ಗುಜರಾತ್ ಟೈಟಾನ್ಸ್ ಕೂಡ 5.625 ಕೋಟಿ ಬ್ರಾಂಡ್ ವ್ಯಾಲ್ಯೂ ಹೊಂದಿದೆ.