ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್ ನಲ್ಲಿ ಸಿಲುಕಿಕೊಂಡಿದ್ದು, 100 ಪಂದ್ಯಗಳನ್ನಾಡಿದರೂ ಒಂದೇ ಒಂದು ಶತಕ ಅವರ ಬ್ಯಾಟ್ ನಿಂದ ಬರದಿರುವುದು ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಈ ಕುರಿತು ಮಾತನಾಡಿರುವ ಮಾಜಿ ಟೀಂ ಇಂಡಿಯಾ ಆಟಗಾರ ಸಂದೀಪ್ ಪಾಟೀಲ್, ರನ್ ಮಷಿನ್ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವ ತೊರೆಯುವುದಕ್ಕೂ ಅವರ ಈಗಿನ ಪ್ರದರ್ಶನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಯಾವುದೇ ಬ್ಯಾಟ್ಸ್ಮನ್ ಮೊದಲ ಎಸೆತದಲ್ಲಿ ಔಟಾದರೆ ಅವರ ಕೌಶಲ್ಯದಲ್ಲಿ ಯಾವುದೇ ನ್ಯೂನತೆಗಳಿವೆಯೇ ಎಂದು ಹೇಳುವುದು ತುಂಬಾ ಕಷ್ಟ. 6 ಎಸೆತಗಳಲ್ಲಿ ಕನಿಷ್ಠ ಒಂದನ್ನು ಎದುರಿಸಿದರೆ ಆ ಬ್ಯಾಟ್ಸ್ಮನ್ ಬ್ಯಾಟಿಂಗ್ನಲ್ಲಿನ ದೋಷಗಳನ್ನು ವಿವರಿಸಬಹುದು. ವಿರಾಟ್ ಕೊಹ್ಲಿ ಅವರು ಕ್ರೀಸ್ಗೆ ಬಂದಾಗ ಸ್ವಲ್ಪ ಒತ್ತಡದಲ್ಲಿದ್ದಾರೆ ಮತ್ತು ಕೊಹ್ಲಿ ತಾಂತ್ರಿಕವಾಗಿ ಬ್ಯಾಟಿಂಗ್ನಲ್ಲಿ ಉತ್ತಮರಾಗಿದ್ದಾರೆ ಎಂದು ಗವಾಸ್ಕರ್ ಹೇಳಿದರು.