IPL 2022 Record: ಟಿ20 ಅಲ್ಲಿ ಹೊಸ ದಾಖಲೆ ಬರೆದ ಧೋನಿ, ಬ್ರಾವೋ ಈಗ ನಂಬರ್ ಒನ್ ಬೌಲರ್
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ಸಿಯಾಗಿ ಮುನ್ನಡೆಸಿದ ನಾಯಕ ಧೋನಿ ಈ ಬಾರಿ ಐಪಿಎಲ್ ಪ್ರಾರಂಭದಿಮದಲೂ ಅಬ್ಬರಿಸುತ್ತಿದ್ದಾರೆ. ಲಕ್ನೋ ನಡುವಿನ ಪಂದ್ಯದಲ್ಲಿ ಧೋನಿ ತಮ್ಮ ಹೆಸರಿಗೆ ವಿನೂತನ ದಾಖಲೆ ಹೊಂದುವ ಮೂಲಕ ತಮಗಿನ್ನೂ ಆಟದ ಮೇಲಿ ಹಿಡಿತ ತಪ್ಪಿಲ್ಲ ಎಂದು ಸಾಭಿಸತು ಪಡಿಸಿದ್ದಾರೆ. ಇವರಂತೆಯೇ ಚೆನ್ನೈ ತಂಡದ ಆಲ್ರೌಂಡರ್ ವಿಂಡಿಸ್ನ ಡ್ವೈನ್ ಬ್ರಾವೋ ಸಹ ಹೊಸ ದಾಖಲೆಯನ್ನು ಬರೆದಿದ್ದು, ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ಸಿಯಾಗಿ ಮುನ್ನಡೆಸಿದ ನಾಯಕ ಧೋನಿ ಈ ಬಾರಿ ಐಪಿಎಲ್ ಪ್ರಾರಂಭದಿಮದಲೂ ಅಬ್ಬರಿಸುತ್ತಿದ್ದಾರೆ. ಲಕ್ನೋ ನಡುವಿನ ಪಂದ್ಯದಲ್ಲಿ ಧೋನಿ ತಮ್ಮ ಹೆಸರಿಗೆ ವಿನೂತನ ದಾಖಲೆ ಹೊಂದುವ ಮೂಲಕ ತಮಗಿನ್ನೂ ಆಟದ ಮೇಲಿ ಹಿಡಿತ ತಪ್ಪಿಲ್ಲ ಎಂದು ಸಾಭಿಸತು ಪಡಿಸಿದ್ದಾರೆ.
2/ 8
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಅಪರೂಪದ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 7,000 ರನ್ ಗಳಿಸಿದ ಐದನೇ ಭಾರತೀಯ ಆಟಗಾರ ಎನಿಸಿಕೊಂಡರು. ಟಿ20 ಮಾದರಿಯಲ್ಲಿ ಲಕ್ನೋ ಪಂದ್ಯಕ್ಕೂ ಮುನ್ನ ಧೋನಿ 6,985 ರನ್ ಗಳಿಸಿದ್ದರು.
3/ 8
ಲಕ್ನೋ ವಿರುದ್ಧ 6 ಎಸೆತಗಳಲ್ಲಿ 16 ರನ್ ಗಳಿಸಿದ್ದ ಧೋನಿ 7,000 ರನ್ ಕ್ಲಬ್ ಸೇರಿದರು. ಧೋನಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 1617 ರನ್ ಮತ್ತು ಐಪಿಎಲ್ನಲ್ಲಿ 4,812 ರನ್ ಗಳಿಸಿದ್ದಾರೆ. ಅವರು ಚಾಂಪಿಯನ್ಸ್ ಲೀಗ್ನಂತಹ ಇತರ T20 ಲೀಗ್ಗಳಲ್ಲಿ ಕೆಲವು ರನ್ಗಳನ್ನು ಕಲೆಹಾಕಿದ್ದರು.
4/ 8
ಧೋನಿಗಿಂತಲೂ ಮೊದಲು 7,000 ರನ್ ಪೂರೈಸಿದ ಆಟಗಾರರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರಾಬಿನ್ ಉತಪ್ಪ ಸೇರಿದ್ದಾರೆ. ವಿರಾಟ್ ಕೊಹ್ಲಿ 10,326 ರನ್, ರೋಹಿತ್ ಶರ್ಮಾ 9,936, ಶಿಖರ್ ಧವನ್ 8,818 ಮತ್ತು ರಾಬಿನ್ ಉತಪ್ಪ 7,120 ರನ್ ಗಳಿಸಿದ್ದಾರೆ.
5/ 8
ಚೆನ್ನೈ ಸೂಪರ್ ಕಿಂಗ್ಸ್ನ ಆರಂಭಿಕ ಪಂದ್ಯದಲ್ಲಿ ಸೋತರೂ, ಮಹೇಂದ್ರ ಸಿಂಗ್ ಧೋನಿ ತಮ್ಮ ಬ್ಯಾಟಿಂಗ್ನಿಂದ ಮಿಂಚಿದರು. ಅವರು 38 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು ಮತ್ತು ಪಂದ್ಯದಲ್ಲಿ ಅಜೇಯರಾಗಿ ಉಳಿದರು. ಇದರೊಂದಿಗೆ ಧೋನಿ ಐಪಿಎಲ್ನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಹಿರಿಯ ಬ್ಯಾಟ್ಸ್ಮನ್ ಎಂಬ ಹೊಸ ದಾಖಲೆ ಬರೆದಿದ್ದಾರೆ.
6/ 8
ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಬೌಲರ್ ಡ್ವೇನ್ ಬ್ರಾವೋ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡರು. ಲಸಿತ್ ಮಾಲಿಂಗ ಅವರ ಅತಿ ಹೆಚ್ಚು ವಿಕೆಟ್ಗಳ ದಾಖಲೆಯನ್ನು ಸರಿಗಟ್ಟಿದರು. ಮಾಲಿಂಗ ತಮ್ಮ ಐಪಿಎಲ್ನಲ್ಲಿ 170 ವಿಕೆಟ್ಗಳನ್ನು ಕಬಳಿಸಿದ್ದಾರೆ.
7/ 8
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಹೂಡಾ ಅವರನ್ನು ಔಟ್ ಮಾಡುವ ಮೂಲಕ ಬ್ರಾವೋ IPL ನಲ್ಲಿ ತಮ್ಮ 171 ನೇ ವಿಕೆಟ್ ಪಡೆದರು. ಡ್ವೇನ್ ಬ್ರಾವೋ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಇತಿಹಾಸ ನಿರ್ಮಿಸಿದರು.
8/ 8
ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಗಳ ಪಟ್ಟಿಯನ್ನು ನೋಡುವುದಾದರೆ, ಬ್ರಾವೋ (171 ವಿಕೆಟ್), ಮಾಲಿಂಗ (170 ವಿಕೆಟ್) ಮೊದಲ ಎರಡು ಸ್ಥಾನದಲ್ಲಿದ್ದಾರೆ. ಅವರ ನಂತರ ಅಮಿತ್ ಮಿಶ್ರಾ (166), ಪಿಯೂಷ್ ಚಾವ್ಲಾ (157) ಮತ್ತು ಹರ್ಭಜನ್ ಸಿಂಗ್ (150) ವಿಕೆಟ್ ಪಡೆದಿದ್ದಾರೆ.