MS Dhoni: ಕನ್ನಡಿಗನ ದಾಖಲೆ ಮುರಿದ ಧೋನಿ, ಹೊಸ ಸಾಧನೆ ಮಾಡಿದ ಕ್ಯಾಪ್ಟನ್ ಕೂಲ್
ಐಪಿಎಲ್ 2022 ಋತುವಿನ ಆರಂಭಕ್ಕೆ ಕೆಲವೇ ದಿನಗಳ ಮೊದಲು ಧೋನಿ ಚೆನ್ನೈ ನಾಯಕತ್ವದಿಂದ ಕೆಳಗಿಳಿದು ಅವರ ಸ್ಥಾನಕ್ಕೆ ರವೀಂದ್ರ ಜಡೇಜಾ ಅವರನ್ನು ತಂದರು. ಆದರೆ ಅರ್ಧ ಸೀಸನ್ ಮುಗಿಯುವುದರೊಳಗಾಗಿ ಮತ್ತೆ ಧೋನಿ ಚೆನ್ನೈ ನಾಯಕತ್ವವನ್ನು ವಹಿಸಿಕೊಂಡರು. ಈ ಮೂಲಕ ಧೋನಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಧೋನಿ ಈಗಾಗಲೇ ಟೀಂ ಇಂಡಿಯಾವನ್ನು ಎರಡು ವಿಶ್ವಕಪ್ (ODI, T20) ಗೆ ಮುನ್ನಡೆಸಿದ ಏಕೈಕ ನಾಯಕರಾಗಿದ್ದಾರೆ.
2/ 6
ಐಪಿಎಲ್ನಲ್ಲೂ ಧೋನಿ ಅನೇಕ ದಾಖಲೆ ಹೊಂದಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಆಗಿಸಿದ್ದಾರೆ. ಅವರು ಚೆನ್ನೈ ತಂಡವನ್ನು ಸತತ 11 ಬಾರಿ ಪ್ಲೇ-ಆಫ್ಗೆ ಮುನ್ನಡೆಸಿದ ದಾಖಲೆಯನ್ನೂ ಹೊಂದಿದ್ದಾರೆ.
3/ 6
ಐಪಿಎಲ್ 2022 ಋತುವಿನ ಆರಂಭಕ್ಕೆ ಕೆಲವೇ ದಿನಗಳ ಮೊದಲು ಧೋನಿ ಚೆನ್ನೈ ನಾಯಕತ್ವದಿಂದ ಕೆಳಗಿಳಿದು ಅವರ ಸ್ಥಾನಕ್ಕೆ ರವೀಂದ್ರ ಜಡೇಜಾ ಅವರನ್ನು ತಂದರು. ಆದರೆ ಅರ್ಧ ಸೀಸನ್ ಮುಗಿಯುವುದರೊಳಗಾಗಿ ಮತ್ತೆ ಧೋನಿ ಚೆನ್ನೈ ನಾಯಕತ್ವವನ್ನು ವಹಿಸಿಕೊಂಡರು. ಈ ಮೂಲಕ ಧೋನಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
4/ 6
ಅದರೊಂದಿಗೆ ಕಳೆದ ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾದರು. ಈ ಪ್ರಕ್ರಿಯೆಯಲ್ಲಿ ಅವರು ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದ ದಾಖಲೆಯನ್ನು ಮುರಿದರು.
5/ 6
ಕನ್ನಡಿಗ ರಾಹುಲ್ ದ್ರಾವಿಡ್ 40 ವರ್ಷ 268 ದಿನಗಳ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ದ್ರಾವಿಡ್ ಐಪಿಎಲ್ನಲ್ಲಿ ತಂಡದ ನಾಯಕತ್ವ ವಹಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಸಾಧನೆಯನ್ನು ಮಾಡಿದ್ದರು.
6/ 6
ಆದರೆ ಧೋನಿ ಹೈದರಾಬಾದ್ ತಂಡದ ವಿರುದ್ಧ ನಾಯಕರಾಗುವ ಮೂಲಕ ದ್ರಾವಿಡ್ ಅವರ ದಾಖಲೆಯನ್ನು ಮುರಿದರು. ಧೋನಿ 40 ವರ್ಷದ 298 ದಿನಗಳ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗುವ ಮೂಲಕ ದ್ರಾವಿಡ್ ಅವರ ದಾಖಲೆಯನ್ನು ಮುರಿದರು.