ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನ ಲಿಯಾಮ್ ಲಿವಿಂಗ್ ಸ್ಟೋನ್ 108 ಮೀಟರ್ ಸಿಕ್ಸರ್ ಸಿಡಿಸಿದ್ದರು. ಈ ಸೀಸನ್ನಲ್ಲಿ ಇದುವರೆಗೆ ಇದೇ ಅತೀ ದೊಡ್ಡ ಸಿಕ್ಸರ್ ಆಗಿದೆ. ಆದರೆ, ಈ ಸಿಕ್ಸರ್‌ಗಿಂತಲೂ ದೊಡ್ಡ ಸಿಕ್ಸರ್‌ಗಳು ಐಪಿಎಲ್‌ನಲ್ಲಿ ದಾಖಲಾಗಿವೆ. ಐಪಿಎಲ್ ನಲ್ಲಿ ಇದುವರೆಗೆ ದಾಖಲಾದ ಟಾಪ್ 5 ಸಿಕ್ಸರ್ ಗಳ ಬಗ್ಗೆ ತಿಳಿಯೋಣ.
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಆಲ್ಬಿ ಮೊರ್ಕೆಲ್ ಐಪಿಎಲ್‌ನಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾಗ ಮೋರ್ಕೆಲ್ ಈ ಸಾಧನೆ ಮಾಡಿದರು. ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಮೊರ್ಕೆಲ್ 125 ಮೀ ಸಿಕ್ಸರ್ ಬಾರಿಸಿದ್ದಾರೆ. ಅಲ್ಲದೇ ಐಪಿಎಲ್ ಇತಿಹಾಸದಲ್ಲಿ ಇದು ಈವರೆಗೂ ಈ ಸಿಕ್ಸ್ ಅತೀ ದೊಡ್ಡ ಸಿಕ್ಸ್ ಆಗಿದೆ.