ಐಪಿಎಲ್ 2022ರ 15ನೇ ಸೀಸನ್ ಆರಂಭವಾಗಲು ಇನ್ನು ಕೆಲ ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿದೆ. ಇನ್ನು ಕಳೆದ 14 ಸೀಸನ್ ಐಪಿಎಲ್ನಲ್ಲಿ ಕೆಲ ಆಟಗಾರರು ಒಂದೇ ಇನಿಂಗ್ಸ್ನಲ್ಲಿ 10 ಕ್ಕೂ ಹೆಚ್ಚು ಸಿಕ್ಸ್ ಬಾರಿಸಿದ್ದಾರೆ. ಹೀಗೆ ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ ಸಿಕ್ಸ್ಗಳ ಸುರಿಮಳೆಗೈದ ಬ್ಯಾಟ್ಸ್ಮನ್ಗಳು ಯಾರ್ಯಾರು ಎಂದು ನೋಡೋಣ.
ಕ್ರಿಸ್ ಗೇಲ್: 2013ರಲ್ಲಿ ಗೇಲ್ ಪುಣೆ ವಾರಿಯರ್ಸ್ ವಿರುದ್ದ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. ಈ ವೇಳೆ ಬರೋಬ್ಬರಿ 17 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದ್ದರು. ಇದಲ್ಲದೆಯೇ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 62 ಎಸೆತಗಳಲ್ಲಿ 128 ರನ್ ಗಳಿಸಿ 13 ಸಿಕ್ಸರ್, ಪಂಜಾಬ್ ಕಿಂಗ್ಸ್ 12 ಸಿಕ್ಸ್ ಮತ್ತು ಎಸ್ಆರ್ಹೆಚ್ ವಿರುದ್ದ 11 ಸಿಕ್ಸ್ ಬಾರಿಸಿದ್ದರು.