ರಾಜ್ ಅಂಗದ್ ಬಾವಾ ಅವರು ಈ ವರ್ಷದ IPL ನಲ್ಲಿ ಭಾರತೀಯ ಅನ್ ಕ್ಯಾಪ್ಟೆಡ್ ಆಟಗಾರರ ಪಟ್ಟಿಯಲ್ಲಿ ನೋಡಲೇಬೇಕಾದ ಆಟಗಾರ. ರಾಜ್ ಬಾವಾ ಅಂಡರ್-19 ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಭಾರತ ತಂಡದ ಸದಸ್ಯರಾಗಿದ್ದಾರೆ. ರಾಜ್ ಬಾವಾ ಅವರ ತಂದೆ ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಮಾರ್ಗದರ್ಶಕರೂ ಹೌದು. ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಬಾವಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬ್ಯಾಟಿಂಗ್ ಮತ್ತು ಬಾಲಿಂಗ್ನಿಂದ ಮಿಂಚಿದರು. ಅದಕ್ಕಾಗಿಯೇ ಕಳೆದ ತಿಂಗಳು ನಡೆದ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಅವರಿಗಾಗಿ ಸ್ಪರ್ಧಿಸಿದ್ದವು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ಬಾವಾ ಅವರನ್ನು ರೂ. 2 ಕೋಟಿ ಖರೀದಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್ ನಲ್ಲಿ ಯುವ ಆಲ್ ರೌಂಡರ್ ಗೆ ಭಾರಿ ಬೇಡಿಕೆ ಇದೆ. ರಾಜ್ ಬಾವಾ ದೊಡ್ಡ ಹೊಡೆತಗಳನ್ನು ಆಡುವುದರ ಜೊತೆಗೆ ವಿಕೆಟ್ ಪಡೆಯುವಲ್ಲಿ ದಿಟ್ಟತನ ತೋರಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತೊಬ್ಬ ಯುವರಾಜ್ ಸಿಂಗ್ರಂತೆಯೇ ರಾಜ್ ಬಾವಾ ಆಗುವ ಸಾಧ್ಯತೆ ಇದೆ.
ಎರಡು ತಿಂಗಳ ಹಿಂದೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದ್ದ 19 ವರ್ಷದೊಳಗಿನವರ ವಿಶ್ವಕಪ್ ಎಲ್ಲರಿಗೂ ನೆನಪಿನಲ್ಲಿ ಉಳಿಯುತ್ತದೆ. ಯಶ್ ಧುಲ್ ನೇತೃತ್ವದ ಯಂಗ್ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಕಪ್ ಗೆಲ್ಲಿಸಿಕೊಟ್ಟರು. ಹಾಗಾಗಿಯೇ ಈ ಹುಡುಗನನ್ನು ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಯಶ್ ಧುಲ್ ಐಪಿಎಲ್ ಹರಾಜಿನ ನಂತರ ರಣಜಿ ಪಂದ್ಯಗಳಲ್ಲಿ ಸತತ ಶತಕಗಳನ್ನು ಗಳಿಸಿದರು. 19 ವರ್ಷದೊಳಗಿನವರನ್ನು ನಾಯಕನಾಗಿ ಮುನ್ನಡೆಸುವುದು ಅವರ ಇನ್ನೊಂದು ಶಕ್ತಿ. ಐಪಿಎಲ್ 15ನೇ ಸೀಸನ್ ನಲ್ಲಿ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ರೀತಿ ಯಶ್ ಧೂಲ್ ಸಿಗಬಹುದು.
IPLನ 15 ನೇ ಋತುವಿನಲ್ಲಿ ಬೇಡಿಕೆಯಿರುವ ಇನ್ನೊಬ್ಬ ಭಾರತೀಯ ಹುಡುಗ ರಾಜವರ್ಧನ್ ಸಿಂಗ್ ಹಂರ್ಗೇಕರ್. ಅವರು ಅಂಡರ್-19 ವಿಶ್ವಕಪ್ನಲ್ಲಿ ಭಾಗವಹಿಸಿದ ಟೀಮ್ ಇಂಡಿಯಾದ ಸದಸ್ಯರೂ ಆಗಿದ್ದಾರೆ. ಹೊಸ ಚೆಂಡಿನಲ್ಲಿ ಮ್ಯಾಜಿಕ್ ಮಾಡುವ ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿ ನೀಡಿ ಖರೀದಿಸಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ದೀಪಕ್ ಚಹಾರ್ ಬದಲಿಗೆ ರಾಜವರ್ಧನ್ ಆಡುವ ಸಾಧ್ಯತೆಯಿದೆ.
ಶಹಬಾಜ್ ಅಹ್ಮದ್ ಟೀಂ ಇಂಡಿಯಾ ಪರ ಆಡದಿದ್ದರೂ ಐಪಿಎಲ್ನಲ್ಲಿ ಹೆಚ್ಚಿನ ಬೇಡಿಕೆಯಲ್ಲಿದ್ದಾರೆ. ಶಹಬಾಜ್ ಅಹ್ಮದ್ ಕಳೆದ ವರ್ಷದ ಐಪಿಎಲ್ನಲ್ಲಿ ಮಿಂಚಿದ್ದರು. ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಮೂರು ವಿಕೆಟ್ ಉರುಳಿಸುವ ಮೂಲಕ ಬೆಂಗಳೂರು ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿಯೇ ಬೆಂಗಳೂರು ತಂಡ ಅವರನ್ನು ಮತ್ತೊಮ್ಮೆ ಹರಾಜಿನಲ್ಲಿ ರೂ. 2.4 ಕೋಟಿಗೆ ಖರೀದಿಸಿದೆ.
ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರಲ್ಲಿ ಅರ್ಶ್ ದೀಪ್ ಸಿಂಗ್ ಸಹ ಒಬ್ಬರು. ಇವರೂ ಸಹ ಈವರೆಗೆ ಟೀಂ ಇಂಡಿಯಾ ಪರ ಆಟವಾಡದಿದ್ದರೂ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ರೂ. 4 ಕೋಟಿಗೆ ಅವರನ್ನು ಉಳಿಸಿಕೊಂಡಿದ್ದು, ಅರ್ಶ್ ದೀಪ್ ಸಿಂಗ್ ಡೆತ್ ಓವರ್ಗಳಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಚಾಣಾಕ್ಷರಾಗಿದ್ದಾರೆ. ಆದ್ದರಿಂದಲೇ ಪಂಜಾಬ್ ಕಿಂಗ್ಸ್ ಅವರನ್ನು ಹಾಗೆಯೇ ಇರಿಸಿಕೊಂಡಿದೆ.