ವಿರಾಟ್ ಕೊಹ್ಲಿ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅವರು ಈಗಾಗಲೇ 207 ಪಂದ್ಯಗಳಲ್ಲಿ 6,283 ರನ್ ಗಳಿಸಿದ್ದಾರೆ ಮತ್ತು ಲೀಗ್ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರರಾಗಿದ್ದಾರೆ. ಇದರಲ್ಲಿ 5 ಶತಕ ಹಾಗೂ 42 ಅರ್ಧಶತಕಗಳು ಸೇರಿವೆ. ಮತ್ತು 2016 ರ ಋತುವಿನಲ್ಲಿ, ಕೊಹ್ಲಿ ತಮ್ಮ ವಿಶ್ವರೂಪವನ್ನು ತೋರಿಸಿದರು. ಅವರು 16 ಪಂದ್ಯಗಳಲ್ಲಿ 973 ರನ್ ಗಳಿಸಿದರು ಮತ್ತು ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಹ ಅವರ ಹೆಸರಲ್ಲಿದೆ.
ಐಪಿಎಲ್ 15ನೇ ಸೀಸನ್ಗೂ ಮುನ್ನ ವಿರಾಟ್ ಕೊಹ್ಲಿಯಿಂದ ಮತ್ತೊಂದು ದಾಖಲೆ ನಿರ್ಮಾಣವಾಗುತ್ತಿದೆ. ಅದೇ IPL ನಲ್ಲಿ ಅತಿ ಹೆಚ್ಚು 30 ಪ್ಲಸ್ ರನ್ ಗಳಿಸಿದ ಆಟಗಾರರ ಪಟ್ಟಿ. ಸದ್ಯ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ತಮ್ಮ ಐಪಿಎಲ್ನಲ್ಲಿ 44 ಬಾರಿ 30 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಈ ದಾಖಲೆ ಸನಿಹದಲ್ಲಿ ಮತ್ತೊಬ್ಬ ಭಾರತೀಯ ಆಟಗಾರನಿದ್ದಾನೆ.