IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

ಐಪಿಎಲ್ 2022: ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆರಂಭಿಕ ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ಫುಲ್ ಖುಷಿಯಲ್ಲಿದ್ದರೆ. ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಏಕೆ ಎಂದು ತಿಳಿಯಲು ಮುಂದೆ ಓದಿ

First published:

  • 16

    IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಐಪಿಎಲ್ 2022ರ ಆರಂಭಿಕ ಪಂದ್ಯದಲ್ಲಿ ಸೋಲನ್ನಪ್ಪಿತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗಳಿಂದ ಸೋತಿತು.

    MORE
    GALLERIES

  • 26

    IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ಆದರೆ ಆರಂಭಿಕ ಪಂದ್ಯದಲ್ಲಿ ಸೋತ ಹಾಲಿ ಚಾಂಪಿಯನ್‌ ಇದೀಗ ನಿರಾಳರಾಗಿದ್ದಾರೆ. ತಂಡದ ಸ್ಟಾರ್ ಆಲ್ ರೌಂಡರ್ ಮೊಯಿನ್ ಅಲಿ ತನ್ನ ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದ್ದಾರೆ. ಭಾರತೀಯ ವೀಸಾ ವಿಳಂಬವಾದ ಕಾರಣ ಮೊಯಿನ್ ಅಲಿ ಭಾರತಕ್ಕೆ ತಡವಾಗಿ ಬಂದರು. ಪರಿಣಾಮವಾಗಿ, ಅವರು ನಿಯಮಗಳ ಪ್ರಕಾರ ಕ್ವಾರಂಟೈನ್‌ಗೆ ಹೋದರು ಮತ್ತು ಆರಂಭಿಕ ಪಂದ್ಯಕ್ಕೆ ಲಭ್ಯವಿರಲಿಲ್ಲ. ಆದಾಗ್ಯೂ, ಇತ್ತೀಚೆಗೆ ಅವರು ತಮ್ಮ ಕ್ವಾರಂಟೈನ್ ಮುಗಿಸಿ ತಂಡವನ್ನು ಸೇರಿಕೊಂಡರು.

    MORE
    GALLERIES

  • 36

    IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ಮೋಯಿನ್ ಅಲಿ ಈ ತಿಂಗಳ 31 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ಚೆನ್ನೈ ಆಡಳಿತ ಮಂಡಳಿ ತಿಳಿಸಿದೆ.

    MORE
    GALLERIES

  • 46

    IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿತ್ತು. ಆದರೂ ಆ ತಂಡಕ್ಕೆ ಬ್ಯಾಡ್ ನ್ಯೂಸ್. ದೆಹಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ಖರೀದಿಸಲ್ಪಟ್ಟ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಗಾಯದಿಂದ ಹೊರಗುಳಿದಿದ್ದಾರೆ. ಅಲ್ಲದೇ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವುದು ಅನುಮಾನ ಮೂಡಿಸಿದೆ.

    MORE
    GALLERIES

  • 56

    IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ಕಳೆದ ಬಾರಿಯೂ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು.

    MORE
    GALLERIES

  • 66

    IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ಒಂದು ವೇಳೆ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಉಳಿದ ಅವಧಿಗೆ ಹೊರಗುಳಿದರೆ ಅದು ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

    MORE
    GALLERIES