ದೇಶದಲ್ಲಿ ಒಂದು ಹಂತದಲ್ಲಿ ಕೊರೋನಾ ಪ್ರಕರಣಗಳು ತಗ್ಗಿದೆ. ಹೀಗಾಗಿ ಈ ಬಾರಿ ಐಪಿಎಲ್ 2022 15ನೇ ಆವೃತ್ತಿಯನ್ನು ಬಿಸಿಸಿಐ ಭಾರತದಲ್ಲಿಯೇ ಆಯೋಜಿಸಿದೆ. ಐಪಿಎಲ್ ನಲ್ಲಿ ಕೊರೋನಾ ದೂರವಿರುವಂತೆ ನೋಡಿಕೊಳ್ಳಲು ಬಿಸಿಸಿಐ ಅನೇಖ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಸಂಪೂರ್ಣ ಟೂರ್ನಿಯನ್ನು ಕೇವಲ ಮುಂಬೈನಲ್ಲಿ ಆಯೋಜಿಸಿದೆ. ಆದರೂ ಕೊರೋನಾ ಮಾತ್ರ ಐಪಿಎಲ್ ಅನ್ನು ಬಟ್ಟಿಲ್ಲ. ಈ ಬಾರಿಯೂ ಒಂದು ಕೊರೋನಾ ಪ್ರಕರಣ ಐಪಿಎಲ್ ನಲ್ಲಿ ಕಂಡುಬಂದಿದೆ.