IPL 2022: ಹೊಸ ಅಳಿಯನನ್ನು ಅದ್ಧೂರಿಯಾಗಿ ಸ್ವಾಗತಿಸಿದ RCB, ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ ಮ್ಯಾಕ್ಸ್ವೆಲ್
IPL 2022 RCB: ಆರ್ಸಿಬಿ ಆಟಗಾರ ಮ್ಯಾಕ್ಸ್ವೆಲ್ ಸದ್ಯ ದಾಂಪತ್ಯ ಜೀವನದ ಸಂತಸದಲ್ಲಿದ್ದಾರೆ. ಈ ನಡುವೆ ಅವರು ಭಾರತಕ್ಕೆ ಆಗಮಿಸಿದ್ದು, ಆರ್ಸಿಬಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೊತೆಗೆ ನವ ವಿವಾಹಿತ ಜೋಡಿಗೆ ಆರ್ಸಿಬಿ ಪ್ರಾಂಚೈಸಿ ಅದ್ಧೂರಿ ಸ್ವಾಗತ ಕೋರಿದೆ.
ಆರ್ಸಿಬಿ ಆಟಗಾರ ಮ್ಯಾಕ್ಸ್ವೆಲ್ ಸದ್ಯ ದಾಂಪತ್ಯ ಜೀವನದ ಸಂತಸದಲ್ಲಿದ್ದಾರೆ. ಈ ನಡುವೆ ಅವರು ಭಾರತಕ್ಕೆ ಆಗಮಿಸಿದ್ದು, ಆರ್ಸಿಬಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೊತೆಗೆ ನವ ವಿವಾಹಿತ ಜೋಡಿಗೆ ಆರ್ಸಿಬಿ ಪ್ರಾಂಚೈಸಿ ಅದ್ಧೂರಿ ಸ್ವಾಗತ ಕೋರಿದೆ.
2/ 7
ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್, ಆರ್ಸಿಬಿಯ ಸ್ಪೋಟಕ ಆಟಗಾರ ಗ್ಲೇನ್ ಮ್ಯಾಕ್ವೆಲ್ ಭಾರತಕ್ಕೆ ಆಗಮಿಸಿದ್ದು, ಆರ್ಸಿಬಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ಯುವತಿಯನ್ನು ವಿವಾಹವಾಗಿದ್ದರು.
3/ 7
ಮ್ಯಾಕ್ಸ್ವೆಲ್ ಆರ್ಸಿಬಿ ಮುಂದಿನ ಪಂದ್ಯವಾದ ಏಪ್ರಿಲ್ 9 ರಂದು ನಡೆಯಲಿರುವ ಗುಜರಾತ್ ಟೈಟಾನ್ಸ್ನ ಪಂದ್ಯಕ್ಕೆ ಲಭ್ಯವಿರುತ್ತಾರೆ. ಕ್ವಾರಂಟೈನ್ ಅವಧಿಯು ನಾಲ್ಕು ದಿನಗಳಲ್ಲಿ ಕೊನೆಗೊಳ್ಳಲಿದೆ.
4/ 7
ತಮಿಳು ಸಂಪ್ರದಾಯದ ಪ್ರಕಾರ ಮ್ಯಾಕ್ಸ್ ವೆಲ್ ಮದುವೆ ಅದ್ಧೂರಿಯಾಗಿ ನೆರವೇರಿತು. ಅವರು ವಿನಿ ರಾಮನ್ ಅವರನ್ನು ತಮಿಳು ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾದರು. ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಮ್ಯಾಕ್ಸ್ವೆಲ್ ದಂಪತಿಗಾಗಿ ವಿಶೇಷ ತಯಾರಿಗಳನ್ನು ಮಾಡುವುದರ ಮೂಲಕ ನವವಿವಾಹಿತರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ.
5/ 7
ಮ್ಯಾಕ್ಸ್ವೆಲ್ ದಂಪತಿ ತಂಗಿದ್ದ ಹೋಟೆಲ್ ನಲ್ಲಿ ಪ್ರತ್ಯೇಕ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು. ಜೊತೆಗೆ ನವ ವಿವಾಹಿತರಿಗಾಗಿ ವಿಶೇಷ ಹಾಸಿಗೆಯನ್ನೂ ಸಿದ್ಧಪಡಿಸಲಾಗಿತ್ತು. ಈ ಕುರಿತ ಫೋಟೋಗಳನ್ನು ಮ್ಯಾಕ್ಸ್ವೆಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
6/ 7
ಸಧ್ಯ ಮ್ಯಾಕ್ವೆಲ್ ತಂಡಕ್ಕೆ ಸೇರಿಕೊಳ್ಳುತ್ತಿರುವುದು ಆರ್ಸಿಬಿಗೆ ಸಂತಸದ ಸುದ್ದಿಯಾಗಿದ್ದು, ಬ್ಯಾಟಿಂಗ್ನಲ್ಲಿ ಮತ್ತಷ್ಟು ಬಲ ಬಂದಂತಾಗಿದೆ. ಬ್ಯಾಟಿಂಗ್ ನಲ್ಲಿ ಆರ್ಸಿಬಿ ಈ ಬಾರಿ ಕಳಪೆ ಪ್ರದರ್ಶನ ತೋರುತ್ತತಿದ್ದು, ಮ್ಯಾಕ್ಸಿ ಆಗಮನ ಅಭಿಮಾನಿಗಳಲ್ಲಿ ಹೊಸ ಆಕಾಂಶೆಯನ್ನು ಹುಟ್ಟುಹಾಕಿದೆ.
7/ 7
ಈವರೆಗೆ ಐಪಿಎಲ್ ನಲ್ಲಿ ಮ್ಯಾಕ್ಸ್ವೆಲ್ 97 ಪಂದ್ಯಗಳನ್ನಾಡಿದ್ದು, 151 ಸರಾಸರಿಯಲ್ಲಿ ಒಟ್ಟು 2018 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಅರ್ಧ ಶತಕ ಸಹ ಕೂಡಿದೆ.