Dinesh karthik: 4, 4, 4, 6, 6, 4 ಅಂತಿಮ ಹಂತದಲ್ಲಿ ಅಬ್ಬರಿಸಿದ ಕಾರ್ತಿಕ್, ಮತ್ತೆ ಗೇಮ್ ಚೇಂಜರ್ ಆದ RCB ಫಿನಿಶರ್
ದಿನೇಶ್ ಕಾರ್ತಿಕ್ ಶನಿವಾರ ರಾತ್ರಿ IPL ತಂಡಗಳಿಗೆ ತಮ್ಮ ಶಕ್ತಿಯನ್ನು ತೋರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಫಿನಿಶರ್ ದಿನೇಶ್ ಕಾರ್ತಿಕ್ ಅಬ್ಬರದ ಪ್ರದರ್ಶನ ನೀಡಿ ರಂಜಿಸಿದರು. ಒಂದೇ ಓವರ್ನಲ್ಲಿ 28 ರನ್ ಸಿಡಿಸಿದರು.
ಐಪಿಎಲ್ 2022ರಲ್ಲಿ ಆರ್ಸಿಬಿ ಪರ ದಿನೇಶ್ ಕಾರ್ತಿಕ್ ಪ್ರತಿ ಪಂದ್ಯದಲ್ಲಿಯೂ ಮಿಂಚುತ್ತಿದ್ದಾರೆ. ಅಲ್ಲದೇ ಆರ್ಸಿಬಿ ಪರ ಸೂಪರ್ ಫಿನಿಶರ್ ಆಗಿ ಗುರತಿಸಿಕೊಂಡಿದ್ದು, ತಂಡದ ಆಫತ್ಬಾಂಧವರಾಗಿದ್ದಾರೆ. ಅದರಲ್ಲಿಯೂ ನಿನ್ನೆಯ ಪಂದ್ಯದಲ್ಲಿ ಅಕ್ಷರ ಸಹ ತಂಡವನ್ನು ಗೆಲುವಿನ ಹಾದಿಗೆ ಕೊಂಡ್ಯದಿದ್ದಾರೆ.
2/ 6
ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಎದುರಾಳಿ ಬೌಲರ್ ಗಳನ್ನು ಕೈ ತೊಳೆದುಕೊಂಡಿದ್ದರು. ಆದರೆ 18ನೇ ಓವರ್ನಲ್ಲಿ ಮುಸ್ತಾಫಿಜುರ್ ಓವರ್ ನಲ್ಲಿ ಬೌಂಡರಿಗಳ ಸುರಿಮಳೆಗೈದರು.
3/ 6
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ 19ನೇ ಓವರ್ ಅನ್ನು ಮುಸ್ತಫಿಜುರ್ ರೆಹಮಾನ್ ಗೆ ನೀಡಿದರು. ಅಲ್ಲಿಯವರೆಗೆ ಆರ್ಸಿಬಿ ತಂಡದ ಮೊತ್ತ ಸಾಧಾರಣವಾಗಿತ್ತು. ಆದರೆ ಈ ಓವರ್ ನಲ್ಲಿ ಅಬ್ಬರಿಸಿದ ದಿನೇ ಶ್ ಕಾರ್ತಿಕ್ ಪಂದ್ಯದ ಗತಿಯನ್ನೇ ಬದಲಿಸಿದರು. ಒಂದೇ ಓವರ್ ನಲ್ಲಿ 28 ರನ್ ಗಳಸಿ ಮಿಂಚಿದರು.
4/ 6
ಆ ಓವರ್ನಲ್ಲಿ, ಕಾರ್ತಿಕ್ ಓವರ್ನಲ್ಲಿ 28 ರನ್ ಗಳಿಸಿದರು. 4, 4, 4, 6, 6, 4 ಅನ್ನು ಹೊಡೆದರು. 2022ರ ಋತುವಿನಲ್ಲಿ RCB ಪರ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕಾರ್ತಿಕ್ ಹೊಂದಿದ್ದಾರೆ.
5/ 6
ಕಾರ್ತಿಕ್ (34 ಎಸೆತಗಳಲ್ಲಿ 66 ರನ್) ಅಜೇಯ ಅರ್ಧಶತಕದೊಂದಿಗೆ ಪಂದ್ಯd ಗತಿಯನ್ನು ಬದಲಿಸಿದರು. . ಮ್ಯಾಕ್ಸ್ವೆಲ್ 34 ಎಸೆತಗಳಲ್ಲಿ 55 ರನ್ ಗಳಿಸಿ ಅರ್ಧಶತಕ ಗಳಿಸಿದರು. ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ಗೆ 189 ರನ್ ಗಳಿಸಿತು.
6/ 6
ನಂತರದ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ 20 ಓವರ್ಗಳಲ್ಲಿ 7 ವಿಕೆಟ್ಗೆ 173 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಾರ್ನರ್ (66) ಮತ್ತು ಪಂತ್ (34) ಹೊರತುಪಡಿಸಿದರೆ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಪಂದ್ಯವನ್ನು ಆರ್ಸಿಬಿ 16 ರನ್ಗಳಿಂದ ಗೆದ್ದುಕೊಂಡಿತು.