ದೆಹಲಿ ಕ್ಯಾಪಿಟಲ್ಸ್ ಫಿಸಿಯೋ ಪ್ಯಾಟ್ರಿಕ್ ಫಾರ್ಹಾರ್ಟ್ ಅವರಿಗೆ ಕೊರೋನಾ ಫಾಸಿಟಿವ್ ಇರುವುದು ದೃಢಪಟ್ಟಿದೆ. ತಂಡದ ಮ್ಯಾನೇಜ್ಮೆಂಟ್ ಅವರನ್ನು ತಕ್ಷಣವೇ ಐಸೋಲೇಷನ್ಗೆ ಸ್ಥಳಾಂತರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವೈದ್ಯಕೀಯ ತಂಡವು ಪ್ಯಾಟ್ರಿಕ್ ಫರ್ಹಾರ್ಟ್ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಪ್ಯಾಟ್ರಿಕ್ ಅವರ ಸಂಪರ್ಕದಲ್ಲಿದ್ದ ಆಟಗಾರರು ಮತ್ತು ಸಿಬ್ಬಂದಿಗೆ ಕೊರೋನಾ ಪರೀಕ್ಷೆಗಳನ್ನು ನಡೆಸಿದೆ. ಆದರೆ, ಯಾರೊಬ್ಬರೂ ಪಾಸಿಟಿವ್ ಆಗದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ ಮೆಂಟ್ ಸಧ್ಯ ನಿಟ್ಟುಸಿರು ಬಿಟ್ಟಿದೆ.