IPL 2022 David Warner: ವಿನೂತನ ದಾಖಲೆ ನಿರ್ಮಿಸಿದ ವಾರ್ನರ್, ಈ ಸಾಧನೆ ಮಾಡಿದ 2ನೇ ಆಟಗಾರ
ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್. ಈ ಬಾರಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಓಪನರ್ ಆಗಿ ಕಣಕ್ಕಿಳಿಯುತ್ತಿರುವ ವಾರ್ನರ್ ಕಳೆದ ರಾತ್ರಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿನೂತನ ದಾಖಲೆ ಬರೆದರು.
ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಋತುವಿನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ ಮೊದಲ ಒಂದು ಪಂದ್ಯವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
2/ 6
ಸತತ ಮೂರು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಡೇವಿಡ್ ವಾರ್ನರ್ (30 ಎಸೆತಗಳಲ್ಲಿ ಔಟಾಗದೆ 60; 10 ಬೌಂಡರಿ, 1 ಸಿಕ್ಸರ್) ಪಂಜಾಬ್ ವಿರುದ್ಧ ಇನಿಂಗ್ಸ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ಗೆ 9 ವಿಕೆಟ್ಗಳ ಸೂಪರ್ ಗೆಲುವು ತಂದುಕೊಟ್ಟರು.
3/ 6
ಈ ಕ್ರಮದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ವಾರ್ನರ್ ಪಮಜಾಬ್ ವಿರುದ್ಧ ಈ ದಾಖಲೆ ನಿರ್ಮಿಸಿದ್ದಾರೆ.
4/ 6
ಒಂದೇ ತಂಡದ ವಿರುದ್ಧ 1000 ರನ್ ಗಳಿಸಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ಪಂಜಾಬ್ ವಿರುದ್ಧ 21 ಪಂದ್ಯಗಳನ್ನು ಆಡಿರುವ ವಾರ್ನರ್ 945 ರನ್ ಗಳಿಸಿದ್ದರು. ಇದೀಗ 60 ರನ್ ಗಳಿಸಿರುವ ವಾರ್ನರ್ 1005 ರನ್ ಗಳಿಸಿದ್ದಾರೆ.
5/ 6
ಇದಕ್ಕೂ ಮುನ್ನ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರು. ರೋಹಿತ್ ಶರ್ಮಾ ಈ ಹಿಂದೆ ಕೆಕೆಆರ್ ವಿರುದ್ಧ 1000 ರನ್ ಗಳಿಸಿದ್ದರು.
6/ 6
ಇದು ಪಂಜಾಬ್ ವಿರುದ್ಧ ಒಟ್ಟಾರೆ ವಾರ್ನರ್ ಅವರ ಹನ್ನೆರಡನೇ ಅರ್ಧಶತಕವಾಗಿದೆ. ಇದರೊಂದಿಗೆ ತಂಡವೊಂದರ ವಿರುದ್ಧ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ದಾಖಲೆಯನ್ನು ಮಾಡಿದ್ದಾರೆ.