ಅದೇ ಈಗ ಚೆನ್ನೈ ಪಾಲಿನ ಶಾಪವಾಗಿ ಪರಿಣಮಿಸಿದೆ. ಏಕೆಂದರೆ ಡೆವೊನ್ ಕಾನ್ವೇ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಉತ್ತಮವಾಗಿ ಆಡಿದ್ದರು. ಅಲ್ಲದೇ ಕಳೆದ ಕೆಲ ಪಂದ್ಯಗಳಿಂದ ಕಣಕ್ಕಿಳಿಯುತ್ತಿರುವ ಅವರು, ಉತ್ತಮವಾಗಿ ಆಡುತ್ತಿರುವುದರಿಂದ ಆರಮಬಿಕ ಪಂದ್ಯಗಳಲ್ಲಿ ಅವರನ್ನು ದೂರ ಇರಿಸಿದ್ದು ಚೆನ್ನೈಗೆ ಮುಳುವಾದಂತಾಯಿತು ಎನ್ನಬಹುದು.
ಒಂದೇ ಒಂದು ಪಂದ್ಯದಲ್ಲಿ ಆಡಲಿಲ್ಲ ಎಂಬ ಕಾರಣಕ್ಕೆ ಅಂತಹ ಆಟಗಾರನನ್ನು ಅಂತಿಮ ತಂಡದಿಂದ ಹೊರಗಿಟ್ಟಿರುವುದು ಸರಿಯಾದ ನಿರ್ಧಾರವಲ್ಲ. ಅವರು ಕೆಲವು ಪಂದ್ಯಗಳಿಗೆ ಬೆಂಚ್ಗೆ ಸೀಮಿತರಾಗಿದ್ದರು ಮತ್ತು ಸನ್ರೈಸರ್ಸ್ ವಿರುದ್ಧದ ಪಂದ್ಯದೊಂದಿಗೆ ಮರಳಿದರು. ಆ ಬಳಿಕ ಆಡಿದ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಚೆನ್ನೈ ಎರಡರಲ್ಲಿ ಗೆದ್ದಿದೆ. ಕೊಂಚ ಮೊದಲೇ ಕಾನ್ವೆಯನ್ನು ತಂಡಕ್ಕೆ ಕರೆತಂದಿದ್ದರೆ ಚೆನ್ನೈ ಕಥೆಯೇ ಬೇರೆಯಾಗುತ್ತಿತ್ತು.